ಕೆಲವು ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟು ಆಗದೇ ಇರುವುದರಿಂದ ಅನೇಕ ಸಮ್ಯೆಗಳನ್ನು ಎದುರಿಸುತ್ತಾರೆ.
ಕೆಲವರಿಗೆ 2ರಿಂದ 3 ತಿಂಗಳಾದರೂ ಸರಿಯಾಗಿ ಮುಟ್ಟಾಗದೇ ಇರುತ್ತದೆ. ಇದರಿಂದ ಮುಂದೆ ಗರ್ಭದಾರಣೆಗೂ ಸಮಸ್ಯೆ ಆಗುತ್ತದೆ. ಇಲ್ಲೊಂದಿಷ್ಟು ಟಿಪ್ಸ್ ಇದೆ. ಇದನ್ನು ಅನುಸರಿಸಿದರೆ ಪಿರಿಯೆಡ್ಸ್ ಸರಿಯಾದ ಸಮಯಕ್ಕೆ ಆಗುತ್ತದೆ.
1 ಗ್ಲಾಸ್ ನೀರು ತೆಗೆದುಕೊಂಡು ಗ್ಯಾಸ್ ಮೇಲೆ ಇಡಿ. ಇದು ತುಸು ಬಿಸಿಯಾಗುತ್ತಿದ್ದಂತೆ ಅದಕ್ಕೆ ಅರ್ಧ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ 5 ನಿಮಿಷಗಳ ಕಾಲ ಕುದಿಸಿ ನಂತರ ಚಿಕ್ಕ ತುಂಡು ಚಕ್ಕೆ, ಚಿಟಿಕೆ ಅರಿಶಿನ ಹಾಕಿ ಕುದಿಸಿ. 1 ಗ್ಲಾಸ್ ನೀರು ಅರ್ಧ ಗ್ಲಾಸ್ ಗೆ ಬಂದಾಗ ಗ್ಯಾಸ್ ಆಫ್ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.
ಹಾಗೇ ಒಂದು ಗ್ಲಾಸ್ ನೀರನ್ನು ಕುದಿಸಿ ಅದಕ್ಕೆ ಸಣ್ಣ ತುಂಡು ಶುಂಠಿ ಜಜ್ಜಿ ಹಾಕಿ ಅರ್ಧ ಗ್ಲಾಸ್ ಆಗುವವರಗೆ ಕುದಿಸಿ ನಂತರ ಇದನ್ನು ಶೋಧಿಸಿಕೊಳ್ಳಿ. ಈ ನೀರು ಉಗುರು ಬೆಚ್ಚಗೆ ಆದ ಮೇಲೆ ಅದಕ್ಕೆ 1 ಟೀ ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿಕೊಂಡು ಕುಡಿಯಿರಿ.
ಆದಷ್ಟು ಜಂಕ್ ಫುಡ್ ಗಳ ಸೇವನೆ ಕಡಿಮೆ ಮಾಡಿ. ಆಹಾರದಲ್ಲಿ ಹಣ್ಣು, ತರಕಾರಿ, ಕಾಳುಗಳನ್ನು ಬಳಸಿ.ಯೋಗ, ವಾಕಿಂಗ್ ಕೂಡ ರೆಗ್ಯುಲರ್ ಪಿರಿಯೆಡ್ ಆಗುವುದಕ್ಕೆ ಸಹಾಯವಾಗಲಿದೆ.