ಶಾಪಿಂಗ್ ಯಾರಿಗೆ ಇಷ್ಟವಿಲ್ಲ. ಕೈನಲ್ಲಿ ಹಣವಿದ್ರೆ ಕಂಡಿದ್ದೆಲ್ಲ ಬೇಕು ಎನ್ನುವವರ ಸಂಖ್ಯೆ ಹೆಚ್ಚು. ಇಷ್ಟಪಟ್ಟು ಮನೆಗೆ ತರುವ ಕೆಲ ವಸ್ತುಗಳು ತುಂಬಾ ದಿನ ಬಾಳಿಕೆ ಬರೋದಿಲ್ಲ.
ಮತ್ತೆ ಕೆಲ ವಸ್ತುಗಳು ವರ್ಷಾನುಗಟ್ಟಲೆ ನಮ್ಮ ಜೊತೆಗಿರುತ್ತವೆ. ಇದಕ್ಕೆ ವಾಸ್ತು ಮುಖ್ಯ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ವಸ್ತು ಖರೀದಿ ಬಗ್ಗೆಯೂ ಹೇಳಲಾಗಿದೆ. ಯಾವ ದಿನ, ಯಾವ ವಸ್ತು ಖರೀದಿ ಮಾಡಿದ್ರೆ ಮಂಗಳಕರವೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಭಾನುವಾರ: ಇದು ಸೂರ್ಯದೇವನ ದಿನ. ಹಾಗಾಗಿ ಈ ದಿನ ಕೆಂಪು ವಸ್ತು, ಗೋಧಿ, ಪರ್ಸ್, ಔಷಧಿ, ಫ್ರಿಜ್, ಕಣ್ಣಿಗೆ ಸಂಬಂಧಿಸಿದ ವಸ್ತು ಖರೀದಿ ಶುಭಕರ. ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿ ಮಾಡಬಾರದು. ಪಿಠೋಪಕರಣ, ಯಂತ್ರದ ಬಿಡಿ ಭಾಗ, ವಾಹನಗಳನ್ನು ಖರೀದಿ ಮಾಡಬಾರದು.
ಸೋಮವಾರ: ಭಗವಂತ ಶಿವನಿಗೆ ಅರ್ಪಿತವಾದ ದಿನ. ಸೋಮವಾರ ಅಕ್ಕಿ, ಪಾತ್ರೆ, ಔಷಧಿ, ಹಾಲು, ಹಾಲಿನಿಂದ ಮಾಡಿದ ಸಿಹಿಯನ್ನು ಖರೀದಿ ಮಾಡಬಹುದು. ದಿನಸಿ, ಕಲೆಗೆ ಸಂಬಂಧಿಸಿದ ವಸ್ತು, ಆಟದ ಸಾಮಾನು, ಕಂಪ್ಯೂಟರ್, ಮೊಬೈಲ್ ಖರೀದಿ ಮಾಡಬಾರದು.
ಮಂಗಳವಾರ: ಅಮಂಗಳ ದೂರ ಮಾಡಿ ಮಂಗಳವನ್ನು ನೀಡುವ ಭಜರಂಗಬಲಿ ದಿನವಿದು. ಅಡುಗೆ ಮನೆ ಸಾಮಗ್ರಿ, ಕೆಂಪು ವಸ್ತು, ಆಸ್ತಿ ಖರೀದಿ ಶುಭಕರ. ಮಂಗಳವಾರ ಚಪ್ಪಲಿ ಖರೀದಿ ಮಾಡಬೇಡಿ. ಕಬ್ಬಿಣದ ವಸ್ತು, ಪಿಠೋಪಕರಣ, ಮೊಬೈಲ್ ಖರೀದಿಯಿಂದ ದೂರವಿರಿ.
ಬುಧವಾರ: ಇದು ಗಣೇಶನಿಗೆ ಅರ್ಪಿತ ದಿನ. ಬುಧವಾರ ದಿನಸಿ, ಕಲೆಗೆ ಸಂಬಂಧಿಸಿದ ವಸ್ತು, ವಾಹನ, ಮನೆ ಅಲಂಕಾರದ ವಸ್ತು ಖರೀದಿ ಮಾಡಬಹುದು. ಬುಧವಾರ ಅಕ್ಕಿ, ಔಷಧಿ, ಪಾತ್ರೆ ಖರೀದಿ ಮಾಡಬಾರದು.
ಗುರವಾರ: ನಾರಾಯಣನಿಗೆ ಅರ್ಪಿತ ಈ ದಿನ ಇಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿ ಮಾಡುವುದು ಶುಭ. ಆಸ್ತಿಗೆ ಸಂಬಂಧಿಸಿದ ವಸ್ತುಗಳ ಖರೀದಿ ಮಂಗಳಕರ. ಕಣ್ಣಿಗೆ ಸಂಬಂಧಿಸಿದ ಕನ್ನಡಕ, ಕಾಡಿಗೆ ಖರೀದಿ ಮಾಡಬಾರದು. ಪಾತ್ರೆ, ನೀರು, ನಕಲಿ ವಸ್ತುಗಳನ್ನು ಖರೀದಿ ಮಾಡಬೇಡಿ.
ಶುಕ್ರವಾರ: ತಾಯಿ ಲಕ್ಷ್ಮಿಯ ದಿನವಿದು. ಪರ್ಸ್, ಬೆಲ್ಟ್, ಚಪ್ಪಲಿ, ಸೌಂದರ್ಯ ವರ್ಧಕ ಸಾಮಗ್ರಿ ಖರೀದಿ ಮಾಡಿ. ಅಡುಗೆ ಮನೆ ಹಾಗೂ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಬೇಡಿ.
ಶನಿವಾರ: ಶನಿ ದೇವನಿಗೆ ಅರ್ಪಿತ ದಿನವಿದು. ವಾಹನ, ಮಶಿನ್, ಪಿಠೋಪಕರಣ, ರತ್ನಗಂಬಳಿ, ಪರದೆಯನ್ನು ಖರೀದಿ ಮಾಡಿ. ಸಾಸಿವೆ, ಉಪ್ಪು, ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಖರೀದಿ ಮಾಡಬೇಡಿ. ಕಬ್ಬಿಣದ ವಸ್ತು, ಚಾಕು, ಧಾನ್ಯಗಳನ್ನು ಖರೀದಿ ಮಾಡಬೇಡಿ.