ತಡರಾತ್ರಿಯಾದ್ರೂ ಸರಿಯಾಗಿ ನಿದ್ರೆ ಬರ್ತಾ ಇಲ್ಲ. ನಿದ್ರೆ ಮಾಡೋದಕ್ಕೆ ಪ್ರತಿದಿನ ಕಸರತ್ತು ಮಾಡ್ಬೇಕು ಎನ್ನುವವರ ಸಾಲಿನಲ್ಲಿ ನೀವೂ ಇದ್ದೀರಾ? ಹಾಗಿದ್ರೆ ನಾವು ಹೇಳುವ ಕೆಲ ಟಿಪ್ಸ್ ಅನುಸರಿಸಿ. ರಾತ್ರಿ ಪೂರ್ತಿ ಆರಾಮವಾಗಿ ನಿದ್ರೆ ಮಾಡಿ.
ರಾತ್ರಿ ಮಲಗುವ ಮೊದಲು ಪುಸ್ತಕ ಓದೋದನ್ನು ಕಲಿತುಕೊಳ್ಳಿ.
ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಮದ್ಯ ಸೇವನೆ ಮಾಡಬೇಡಿ.
ಸಂಗೀತ ಕೇಳುವ ಅಭ್ಯಾಸವಿದ್ದರೆ ಸುಮಧುರ ಸಂಗೀತವನ್ನು ಕೇಳಿ.
ಸಂಖ್ಯೆಯನ್ನು ಉಲ್ಟಾ ಹೇಳಲು ಶುರುಮಾಡಿ. ಅಂದ್ರೆ 200, 199 ಹೀಗೆ ಉಲ್ಟಾ ಸಂಖ್ಯೆ ಹೇಳ್ತಾ ಹೋದಂತೆ ನಿದ್ರೆ ನಿಮಗೆ ಗೊತ್ತಿಲ್ಲದೆ ಬರುತ್ತೆ ಮಾಡಿ ನೋಡಿ.
ನಿದ್ರೆ ಬರ್ತಾ ಇಲ್ಲ ಎಂದಾದ್ರೆ ನಿಮ್ಮ ಉಸಿರಾಟದ ಬಗ್ಗೆ ಗಮನ ನೀಡಿ.
ರಾತ್ರಿ ಹಾಸಿಗೆಗೆ ಹೋಗುವ ಮೊದಲು ಸ್ನಾನ ಮಾಡಿ ಮಲಗಿ. ಸುಸ್ತು ಕಡಿಮೆಯಾಗಿ ಹಿತವಾದ ನಿದ್ರೆ ಬರುತ್ತದೆ.