ಇಡೀ ದಿನ ಚೆನ್ನಾಗಿರಬೇಕೆಂದ್ರೆ ಆರಂಭ ಉತ್ತಮವಾಗಿರಬೇಕು. ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಮನಸ್ಸು ಶಾಂತವಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಇಡೀ ದಿನವನ್ನು ಅವಲಂಬಿಸಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡಬಾರದು. ಹಾಗೆ ಕೆಲವೊಂದು ವಸ್ತುಗಳನ್ನು ಅವಶ್ಯಕವಾಗಿ ನೋಡಬೇಕು.
ವಾಸ್ತುಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು. ಹಾಗೆ ಗೋಡೆಗೆ ಹಾಕಿರುವ ಹಾಗೂ ಕರ್ಟನ್ ನಲ್ಲಿರುವ ಕಾಡು ಪ್ರಾಣಿಗಳ ಫೋಟೋವನ್ನು ನೋಡಬೇಡಿ. ಸಾಕು ಪ್ರಾಣಿಗಳು ನಿಮ್ಮ ಜೊತೆ ಮಲಗಿದ್ದರೆ ಬೆಳಿಗ್ಗೆ ಎದ್ದ ತಕ್ಷಣ ಅದರ ಮುಖವನ್ನು ನೋಡಬಾರದು. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಅಥವಾ ನಿಮ್ಮ ಕುಟುಂಬಸ್ಥರ ನೆರಳನ್ನು ನೋಡಬೇಡಿ. ಸೂರ್ಯನ ದರ್ಶನ ಮಾಡುವುದಾದ್ರೆ ನೆರಳಿನ ಬಗ್ಗೆ ಎಚ್ಚರ ವಹಿಸಿ. ಮುಂಜಾನೆ ಕೊಳಕು ಪಾತ್ರೆ ನೋಡುವುದು ಹಾಗೂ ಟಾಯ್ಲೆಟ್ ಕಮೋಡ್ ನೋಡುವುದು ಕೂಡ ಶುಭವಲ್ಲ.
ಬೆಳಿಗ್ಗೆ ಎದ್ದ ತಕ್ಷಣ ಅಂಗೈ ನೋಡಿ ಮಂತ್ರ ಪಠಿಸಿ. ದೇವರ ಪ್ರಾರ್ಥನೆ ಮಾಡಿ ಕೈಗಳನ್ನು ಉಜ್ಜಿ ಕಣ್ಣಿನ ಮೇಲಿಡಿ. ನಂತ್ರ ನೀರು ಕುಡಿಯಿರಿ. ಸೂರ್ಯನ ದರ್ಶನ ಮಾಡಿ.