ಉಗುರುಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಆದರೆ ಈ ನೈಲ್ ಪಾಲಿಶ್ ನ್ನು ಸರಿಯಾಗಿ ಹಚ್ಚದಿದ್ದರೆ ಅದು ಉಗುರಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ನೈಲ್ ಪಾಲಿಶ್ ಹಚ್ಚುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ.
ಉಗುರಿಗೆ ಹಚ್ಚಿದ ನೈಲ್ ಪಾಲಿಶ್ ನ್ನು ತೆಗೆಯಲು ರಿಮೂವರ್ ಬಳಸುತ್ತೇವೆ. ಈ ರಿಮೂವರ್ ನಿಂದ ಉಳಿದಿರುವ ತೈಲವನ್ನು ತೆಗೆಯಲು ನೀರಿಗೆ ಬಿಳಿ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ನಿಮ್ಮ ಕೈಬೆರಳುಗಳನ್ನು ನೆನೆಸಿಡಿ.
ಬಳಿಕ ಉಗುರು ಹಳದಿಯಾಗಿದ್ದರೆ ಟೂತ್ ಪೇಸ್ಟ್ ನ್ನು ಉಗುರುಗಳಿಗೆ ಹಚ್ಚಿ ಬ್ರಷ್ ನಿಂದ ಉಜ್ಜಿ ಕಾಟನ್ ಪ್ಯಾಡ್ ನಲ್ಲಿ ಒರೆಸಿಕೊಳ್ಳಿ. ಬಳಿಕ ನೈಲ್ ಪಾಲಿಶ್ ಹಚ್ಚಿ. ಇದರಿಂದ ಉಗುರುಗಳು ಸ್ವಚ್ಚವಾಗಿ ಕಾಣುತ್ತದೆ.