ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ ನೇಲ್ ಪೇಂಟ್ ಉಗುರಿನ ಮೇಲೆ ಸುಂದರವಾಗಿ ಕಾಣಲಿ ಎಂಬ ಆಸೆ ಹೊಂದರುತ್ತಾರೆ. ಉಗುರಿಗೆ ಬಣ್ಣ ಹಚ್ಚಿದ್ರೆ ಆಗ್ಲಿಲ್ಲ. ಹಚ್ಚಿದ ನಂತ್ರ ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತದೆ. ಆಗ ಮಾತ್ರ ನೇಲ್ ಪೇಂಟ್ ಉಗುರಿನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯ.
ಉಗುರಿಗೆ ಬಣ್ಣ ಹಚ್ಚಿದ ತಕ್ಷಣ ಮಲಗಲು ಹೋಗಬೇಡಿ. ಪೇಂಟ್ ಹಾಸಿಗೆಗೆ ಅಥವಾ ದಿಂಬಿಗೆ ತಾಗಿ ಪೇಂಟ್ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಉಗುರಿಗೆ ಬಣ್ಣ ಹಚ್ಚಿದ ನಂತ್ರ ಅದು ಒಣಗಲು ಬಿಡಬೇಕು. ಇಲ್ಲವಾದ್ರೆ ಹಚ್ಚಿದ ಬಣ್ಣ ಹಾಳಾಗುತ್ತದೆ. ಉಗುರಿಗೆ ಬಣ್ಣ ಹಚ್ಚಿದ ಒಂದು ಗಂಟೆ ನಂತ್ರ ಊಟ ಮಾಡಬೇಕು.
ನೇಲ್ ಪೇಂಟ್ ಹಚ್ಚಿದ ತಕ್ಷಣ ತರಕಾರಿಗಳನ್ನು ಕತ್ತರಿಸುವುದು, ಪಾತ್ರೆಗಳನ್ನು ತೊಳೆಯುವುದು ಅಥವಾ ಅಡುಗೆ ಮಾಡುವುದು ಮುಂತಾದ ಅಡಿಗೆ ಕೆಲಸ ಮಾಡಬೇಡಿ. ಉಗುರು ಬಣ್ಣವು ತಕ್ಷಣ ಒಣಗುವುದಿಲ್ಲ.
ನೇಲ್ ಪೇಂಟ್ ಹಚ್ಚಿದ ತಕ್ಷಣ ಬಟ್ಟೆ ತೊಳೆಯುವ ಕೆಲಸಕ್ಕೂ ಹೋಗಬೇಡಿ. ಪೇಂಟ್ ತುಂಬಾ ದಿನ ಸುಂದರವಾಗಿರಬೇಕೆಂದ್ರೆ ಪೇಂಟ್ ಸಂಪೂರ್ಣ ಒಣಗಲು ಬಿಡಬೇಕು.