alex Certify ಮಗಳು ಮೊದಲ ಬಾರಿ ಗಂಡನ ಮನೆಗೆ ಹೋಗ್ತಾ ಇದ್ದರೆ ಇವನ್ನು ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು ಮೊದಲ ಬಾರಿ ಗಂಡನ ಮನೆಗೆ ಹೋಗ್ತಾ ಇದ್ದರೆ ಇವನ್ನು ಪಾಲಿಸಿ

ಮಗಳ ಮದುವೆ ಸಂಭ್ರಮದಲ್ಲಿ ಪಾಲಕರು ತೇಲಿ ಹೋಗ್ತಾರೆ. ಆದ್ರೆ ಮದುವೆ ಮುಗಿದು ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ಕಾಡುವ ದುಃಖವನ್ನು ವಿವರಿಸಲು ಸಾಧ್ಯವಿಲ್ಲ. ಮಗಳು-ಅಳಿಯ ಸದಾ ಸಂತೋಷವಾಗಿರಲಿ ಎನ್ನುವವರು ಮಗಳು ಮೊದಲ ಬಾರಿ ಗಂಡನ ಮನೆಗೆ ಹೋಗುವ ವೇಳೆ ಈ ಕೆಲಸವನ್ನು ಮಾಡಬೇಕು.

ಹುಡುಗಿ ಮೊದಲ ಬಾರಿ ಗಂಡನ ಮನೆಗೆ ಹೋಗುವಾಗ ತವರಿನಿಂದ ತೆಂಗಿನ ಕಾಯಿಯನ್ನು ತೆಗೆದುಕೊಂಡು ಹೋಗಬೇಕು. ಗಂಡನ ಮನೆಯ ದೇವರ ಕೋಣೆಯಲ್ಲಿ ಇದನ್ನಿಟ್ಟು ನಿಯಮಿತವಾಗಿ ಪೂಜೆ ಮಾಡಬೇಕು.

ವಧು ಗಂಡನ ಮನೆಗೆ ಹೋಗುವ ಮೊದಲು 7 ಅರಿಶಿನದ ಕೊಂಬನ್ನು ತೆಗೆದುಕೊಂಡು ಹೋಗಬೇಕು. ಅದನ್ನು ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ ಬೀರುವಿನಲ್ಲಿ ಇಡಬೇಕು. ಇದ್ರಿಂದ ಹಣದ ಕೊರತೆ ಗಂಡನ ಮನೆಯಲ್ಲಿ ಕಾಡುವುದಿಲ್ಲ.

 ವಿದಾಯದ ಸಮಯದಲ್ಲಿ ತವರಿನಿಂದ ಕುಂಕುಮವನ್ನು ತೆಗೆದುಕೊಂಡು ಹೋಗಿ ಅದನ್ನು ಗಂಡನ ಮನೆಯಲ್ಲಿ ಹಣೆಗೆ ಹಚ್ಚಿಕೊಳ್ಳಬೇಕು. ಇದು ಅದೃಷ್ಟ ಹೆಚ್ಚಿಸುವ ಜೊತೆಗೆ ಪತಿ ಆಯಸ್ಸು ವೃದ್ಧಿಸುತ್ತದೆ.

ವಿದಾಯ ಸಮಯದಲ್ಲಿ ತಂದೆ ಅಥವಾ ತಾಯಿ ಗಂಗಾ ಜಲವನ್ನು ಕಮಲದ ಹೂವಿಗೆ ಹಾಕಿ, ಅದಕ್ಕೆ ಅರಿಶಿನ ಹಾಕಿ ಮಗಳ ತಲೆಗೆ ಚಿಮುಕಿಸಬೇಕು. ನಂತ್ರ ತಾಮ್ರದ ನಾಣ್ಯ ತೆಗೆದುಕೊಂಡು 7 ಬಾರಿ ತಲೆಯಿಂದ ಸುತ್ತು ಹಾಕಿ ಎಸೆಯಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...