ಗಾಯವಾದಾಗ ರಕ್ತ ಬರೋದು ಸಹಜ. ರಕ್ತಸ್ರಾವ ನಿಲ್ಲಿಸುವ ಬದಲು, ಟೆನ್ಷನ್ ಆಗೋರೇ ಜಾಸ್ತಿ. ರಕ್ತ ನೋಡಿ ತಲೆ ತಿರುಗಿ ಬೀಳುವವರೂ ಇದ್ದಾರೆ. ರಕ್ತಸ್ರಾವವಾದಾಗ ಹೆದರದೆ ತಕ್ಷಣ ಕೆಲವೊಂದು ಕ್ರಮ ಕೈಗೊಂಡರೆ ರಕ್ತ ಹೋಗುವುದನ್ನು ತಡೆಯಬಹುದು.
ಆಳವಾದ ಗಾಯವಾದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಆಸ್ಪತ್ರೆಗೆ ಹೋಗುವ ಮುನ್ನ ನೀವು ಪ್ರಥಮ ಚಿಕಿತ್ಸೆಯಾಗಿ ಇವುಗಳನ್ನು ಮಾಡಬಹುದು.
ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ಕಾಫಿ ಪುಡಿ ಉತ್ತಮ ಔಷಧಿ. ಕಾಫಿ ಪುಡಿಯನ್ನು ಗಾಯದ ಮೇಲೆ ಹಾಕಿದರೆ ಅದು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಅರಿಶಿನ ಪುಡಿಯನ್ನು ಕೂಡ ಚಿಕಿತ್ಸೆಗೆ ಬಳಸುತ್ತಾರೆ. ತೆರೆದ ಗಾಯಕ್ಕೆ ಅರಿಶಿನ ಪುಡಿ ಹಾಕುವುದಿಂದ ಸೋಂಕನ್ನು ತಡೆಗಟ್ಟಬಹುದು.
ತಣ್ಣನೆಯ ನೀರಿನಲ್ಲಿ ಟೀ ಬ್ಯಾಗನ್ನು ಮುಳುಗಿಸಿ. ನಂತರ ಗಾಯವಾದ ಜಾಗಕ್ಕೆ ನಿಧಾನವಾಗಿ ಒತ್ತಿ. ಇದರಿಂದ ರಕ್ತಸ್ರಾವ ನಿಷ್ಕ್ರಿಯವಾಗುತ್ತದೆ.
ಗಾಯಕ್ಕೆ ಟೂತ್ಪೇಸ್ಟ್ ಹಚ್ಚುವುದು ಒಳ್ಳೆಯದು. ಇದರಿಂದ ರಕ್ತಸ್ರಾವ ಕಡಿಮೆ ಆಗುವುದಲ್ಲದೇ, ಗಾಯ ಬೇಗ ಗುಣವಾಗುತ್ತದೆ. ಗಾಯದ ಮೇಲೆ ಐಸ್ ತುಂಡುಗಳನ್ನಿಡುವುದರಿಂದಲೂ ರಕ್ತ ಬರುವುದು ನಿಲ್ಲುತ್ತದೆ. ಅಲ್ಲಿಯೇ ರಕ್ತ ಹೆಪ್ಪುಗಟ್ಟಲು ಐಸ್ ಸಹಾಯಕ.