ಮನೆಯಲ್ಲಿ ಜೇಡಗಳು ಬಲೆಗಳನ್ನು ಕಟ್ಟಿಕೊಳ್ಳುತ್ತವೆ. ಇದರಿಂದ ಮನೆ ಅಂದ ಹಾಳಾಗುತ್ತದೆ. ಹಾಗಾಗಿ ಇದನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕಾಗುತ್ತದೆ. ಹಾಗಾಗಿ ಈ ಜೇಡಗಳನ್ನು ಮನೆಯಿಂದ ತಾವಾಗಿಯೇ ಓಡಿ ಹೋಗುವಂತೆ ಮಾಡಲು ಈ ಸಲಹೆ ಪಾಲಿಸಿ.
ಎಸೆನ್ಷಿಯಲ್ ಆಯಿಲ್ ಪರಿಮಳ ಜೇಡಗಳಿಗೆ ಇಷ್ಟವಾಗುವುದಿಲ್ಲ. ಅದರಲ್ಲೂ , ದಾಲ್ಚಿನ್ನಿ, ಲ್ಯಾವೆಂಡರ್, ಪುದೀನಾ ಆಯಿಲ್ ವಾಸನೆಗೆ ಜೇಡಗಳು ನಿಲ್ಲುವುದಿಲ್ಲ. ಹಾಗಾಗಿ ಮನೆಯಲ್ಲೆಲ್ಲಾ ನೀರಿಗೆ ಪುದೀನಾ ಆಯಿಲ್ ಸೇರಿಸಿ ಸಿಂಪಡಿಸಿ. ಇದರಿಂದ ಜೇಡಗಳು ಮನೆಯಿಂದ ಹೊರಗೆ ಹೋಗುತ್ತದೆ.
ಸಿಟ್ರಸ್ ಹಣ್ಣಿನ ವಾಸನೆ ಜೇಡಗಳನ್ನು ತೊಲಗಿಸುತ್ತದೆ. ಹಾಗಾಗಿ ಕಿತ್ತಳೆ, ಮೂಸಂಬಿ, ನಿಂಬೆ ಹಣ್ಣಿನ ಸಿಪ್ಪೆಯನ್ನು ಮನೆಯಲ್ಲಿಡಿ.
ಬೆಳ್ಳುಳ್ಳಿಯ ವಾಸನೆ ಜೇಡಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಮಿಕ್ಸ್ ಮಾಡಿ ಮನೆಯ ತುಂಬಾ ಸಿಂಪಡಿಸಿ. ಆಗ ಮೂಲೆಯಲ್ಲಿರುವ ಜೇಡಗಳು ಮನೆಬಿಟ್ಟು ಹೊರಗೆ ಹೋಗುತ್ತವೆ.
ಹಾಗೇ ಮನೆಯೊಳಗೆ ಪುದೀನಾ, ಲ್ಯಾವೆಂಡರ್ ಮತ್ತು ತುಳಸಿ ಗಿಡವನ್ನು ಪಾಟ್ ನಲ್ಲಿಟ್ಟು ಬೆಳೆಸಿ. ಇದರ ಪರಿಮಳಕ್ಕೆ ಜೇಡಗಳು ಹಾಗೂ ಕೀಟಗಳು ಓಡಿಹೋಗುತ್ತವೆ.