ಕ್ರೆಡಿಟ್ ಕಾರ್ಡ್‌ಗಳು ಖರ್ಚು ಮಾಡಲು ಹೆಚ್ಚಿನ ಅನುಕೂಲತೆ ನೀಡುತ್ತವೆ. ಆದರೂ ಅನೇಕ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೊರತೆಯಿಂದ ಶುಲ್ಕಗಳ ಹೊರೆ ಬೀಳಬಹುದು. ಇಷ್ಟೇ ಅಲ್ಲದೇ ವಿವಿಧ ಪ್ರಯೋಜನ ಮತ್ತು ಕ್ರೆಡಿಟ್ ಲಿಮಿಟ್ ಸಹ ಕಡಿಮೆಯಾಗಲು ಕಾರಣವಾಗುತ್ತದೆ.
ಕ್ರೆಡಿಟ್ ಕಾರ್ಡ್ ಅನ್ನು ಹೇಗೆ ಸ್ಮಾರ್ಟ್ ಆಗಿ ಬಳಸುವುದು, ಶುಲ್ಕಗಳ ಹೊರೆಯಾಗದಂತೆ ನಿರ್ವಹಣೆ ಹೇಗೆಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ.
– ಅವಶ್ಯಕತೆಗೆ ತಕ್ಕಂತೆ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಲು ಯಾವಾಗಲೂ ಪ್ರಯತ್ನಿಸಬೇಕು. ತುಂಬ ಕಾರ್ಡ್‌ಗಳನ್ನು ಆಯ್ಕೆ ಮಾಡುವ ಬದಲು ಒಂದು ಅಥವಾ ಎರಡನ್ನು ಆರಿಸುವುದು ಸೂಕ್ತ ಪ್ರತಿ ಖರ್ಚಿನಲ್ಲಿ ರಿವಾರ್ಡ್ ಪಾಯಿಂಟ್ ಸಂಗ್ರಹಿಸಿ ಅದರ ಲಾಭ ಮಾಡಿಕೊಳ್ಳಬೇಕು.
– ಪ್ರತಿ ತಿಂಗಳ ಖರೀದಿಗಳು ಮತ್ತು ಕಾರ್ಡಿನಿಂದ ಮಾಡುವ ಖರ್ಚಿನ ಬಗ್ಗೆ ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಬೇಕು. ಇದು ಪಾವತಿ ಮೇಲಿನ ಒತ್ತಡ ತಪ್ಪಿಸುತ್ತದೆ.
– ಹಬ್ಬದ ಸಮಯದಲ್ಲಿ ಬ್ಯಾಂಕುಗಳು ದೊಡ್ಡ ಖರೀದಿಗಳನ್ನು ಮಾಡಲು ಹೆಚ್ಚುವರಿ ರಿವಾರ್ಡ್ ಪಾಯಿಂಟ್ಸ್ ಅಥವಾ ಯಾವುದೇ ವೆಚ್ಚವಿಲ್ಲದ ಇಎಂಐನಂತಹ ಅವಕಾಶ ನೀಡುತ್ತವೆ. ಕ್ರೆಡಿಟ್ ಕಾರ್ಡ್‌ನೊಂದಿಗೆ ದೊಡ್ಡ ಟಿಕೆಟ್ ಖರೀದಿ ಮಾಡುವ ಮೊದಲು ಈ ಕೊಡುಗೆಗಳಿಗಾಗಿ ಕಾಯುವುದು ಒಳ್ಳೆಯದು.
ಭಾರತಕ್ಕೆ 3 ನೇ ಅಲೆ ಯಾವಾಗ ಬರುತ್ತೆ…? ಪರಿಣಾಮ ಹೇಗಿರುತ್ತೆ…? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ
– ದೊಡ್ಡ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಯಾವುದೇ ವೆಚ್ಚವಿಲ್ಲದ ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಸರಕು ಖರೀದಿಸಲು ಹೆಚ್ಚುವರಿ ರಿಯಾಯಿತಿ ನೀಡುತ್ತವೆ. ಆ ಕೊಡುಗೆಗಳನ್ನು ಪಡೆದುಕೊಳ್ಳಬೇಕು ಆದರೆ ಯಾವುದೇ ವೆಚ್ಚವಿಲ್ಲದ ಇಎಂಐ, ಸಂಸ್ಕರಣಾ ಶುಲ್ಕದಂತಹ ಗೌಪ್ಯ ವೆಚ್ಚ ಒಳಗೊಂಡಿಲ್ಲ ಎಂದು ಖಾತ್ರಿಪಡಿಸಿಕೊಳ್ಳಬೇಕು.
– ಮಾಸಿಕ ಬಿಲ್ ಮರುಪಾವತಿ ಮಾಡಲು ಬ್ಯಾಂಕುಗಳು 45 ದಿನ ಸಮಯ ನೀಡುತ್ತಿದ್ದರೂ, ಬಾಕಿ ಮೊತ್ತವನ್ನು ನಿರ್ದಿಷ್ಟ ಬಿಲ್ಲಿಂಗ್ ಅವಧಿಯಲ್ಲಿ, ನಿಗದಿತ ದಿನಾಂಕದ ಮೊದಲು ಪಾವತಿ ಸೂಕ್ತವಾಗುತ್ತದೆ. ಬಾಕಿ ಇರುವ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಪಾವತಿಸದಿದ್ದರೆ, ಉಳಿದ ಅವಧಿಗೆ ಬಡ್ಡಿ ವಿಧಿಸಲಾಗುತ್ತದೆ.