ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಸಂತೋಷ, ಶಾಂತಿ, ಖ್ಯಾತಿ ಮತ್ತು ವೈಭವವನ್ನು ತರುತ್ತದೆ ಎಂಬ ನಂಬಿಕೆ ಇದೆ. ಇವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತವೆ. ಲಾಫಿಂಗ್ ಬುದ್ಧನ ಮೂರ್ತಿ ಕೂಡ ಇವುಗಳಲ್ಲೊಂದು. ಅನೇಕರು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸುತ್ತಾರೆ, ಕೆಲವರು ಕಚೇರಿಯ ಮೇಜಿನ ಮೇಲೆ ಇಟ್ಟುಕೊಳ್ಳುತ್ತಾರೆ. ಆದರೆ ಲಾಫಿಂಗ್ ಬುದ್ಧನನ್ನು ಇರಿಸಿಕೊಳ್ಳಲು ಕೆಲವು ನಿಯಮಗಳನ್ನು ಅನುಸರಿಸಬೇಕು.
ಲಾಫಿಂಗ್ ಬುದ್ಧನನ್ನು ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಗುತ್ತಿರುವ ಪ್ರತಿಮೆಯನ್ನು ಇಡಬೇಕು. ಲಾಫಿಂಗ್ ಬುದ್ಧನನ್ನು ಮುಖ್ಯ ದ್ವಾರದ ಮುಂದೆ ಇಡಬಾರದು. ಮೂರ್ತಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮನೆಯ ಮುಖ್ಯ ಗೇಟ್ ಮುಂದೆ ಇಡುವುದಾದಲ್ಲಿ ಅದು ಕನಿಷ್ಠ 30 ಇಂಚುಗಳಷ್ಟು ಎತ್ತರದಲ್ಲಿ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಮೂರ್ತಿಯ ಎತ್ತರವು 30 ಇಂಚುಗಳಿಗಿಂತ ಹೆಚ್ಚು ಮತ್ತು 32.5 ಇಂಚುಗಳಿಗಿಂತ ಕಡಿಮೆಯಿರಬೇಕು. ನಗುವ ಬುದ್ಧನನ್ನು ಅಡಿಗೆ ಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು. ಇದು ನಕಾರಾತ್ಮಕತೆಗೆ ಕಾರಣವಾಗುತ್ತದೆ.
ಫೆಂಗ್ ಶೂಯಿ ಧರ್ಮಗ್ರಂಥಗಳ ಪ್ರಕಾರ ಲಾಫಿಂಗ್ ಬುದ್ಧನ ವಿಗ್ರಹವನ್ನು ಸ್ವಂತ ಹಣದಿಂದ ಖರೀದಿಸಬಾರದು. ಸ್ವಯಂ ಖರೀದಿಸಿದ ಲಾಫಿಂಗ್ ಬುದ್ಧ ಎಂದಿಗೂ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಇದನ್ನು ಯಾರಿಂದಲಾದರೂ ಉಡುಗರೆಯಾಗಿ ಪಡೆಯುವುದು ಸೂಕ್ತ. ಲಾಫಿಂಗ್ ಬುದ್ಧ ಚೀನೀಯರ ದೇವತೆ. ಇದನ್ನು ಪುಟೈ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.