ಮಲಗುವ ಕೋಣೆ, ಬಾತ್ ರೂಮ್ ಹಾಗೂ ಕಾರ್ ಗಳಲ್ಲಿ ಏರ್ ಫ್ರೆಷ್ನರ್ ಬಳಕೆ ಇತ್ತೀಚೆಗೆ ಸಾಮಾನ್ಯ. ಅಸ್ತಮಾದಿಂದ ಬಳುತ್ತಿರುವ ಯಾರಾದರೂ ಏರ್ಫ್ರೆಷ್ನರ್ ಬಳಕೆಯನ್ನು ನಿಷೇಧಿಸುತ್ತಾರೆ. ಏರ್ ಫ್ರೆಷ್ನರ್ ಬಳಸದೇ ನಿಮ್ಮ ಕೋಣೆಯನ್ನು ಸಹ್ಯವಾಗಿಸಬಹುದು. ಕೆಲವೇ ಕೆಲವು ವಿಚಾರಗಳಲ್ಲಿ ಗಮನ ವಹಿಸಿದರೆ ನೀವು ವಾಸಿಸುವ ಕೋಣೆಯಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಬಹುದು.
* ಕೋಣೆಯ ಕಿಟಕಿಗಳನ್ನು ಹಗಲಿನಲ್ಲಿ ಆದಷ್ಟು ತೆರೆದೇ ಇಡಿ. ಗಾಳಿ ಬೆಳಕು ಚೆನ್ನಾಗಿ ಸುಳಿದಾಡುವಂತೆ ಇರಲಿ.
* ಸ್ನಾನದ ನಂತರ ಬಳಸಿದ ಟವಲ್ ಹಾಗೂ ಒದ್ದೆ ಬಟ್ಟೆಗಳನ್ನು ಕೋಣೆಯಲ್ಲೇ ಬಿಡಬೇಡಿ, ಒಣಗಿಸಿ.
* ಕಿಟಕಿಯ ಪರದೆ ಹಾಗೂ ಹಾಸಿಗೆಯ ಬೆಡ್ ಶೀಟ್ಗಳನ್ನು ಆಗಾಗ ಒಗೆದು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ.
* ಕೋಣೆಯ ಒಳಗಿನ ಕಾಲೊರೆಸುವ ಮ್ಯಾಟ್ ಕನಿಷ್ಠ ವಾರಕ್ಕೊಮ್ಮೆ ಆದರೂ ಬದಲಾಯಿಸಿ.
* ಕಾಲ್ಚೀಲಗಳನ್ನು ಕೋಣೆಯ ಒಳಗೆ ಬಿಚ್ಚಿಸಬೇಡಿ.
* ಹೆಚ್ಚು ಗಾಢವಲ್ಲದ ಸಾಂಬ್ರಾಣಿಯನ್ನು ಆಗಾಗ ಹಚ್ಚಿಡಿ.