ತುಳಸಿ, ವಿಷ್ಣುವಿಗೆ ಪ್ರಿಯವಾದ ಗಿಡ. ಸನಾತನ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮನೆಯಂಗಳದಲ್ಲಿ ಇದನ್ನು ನೆಡುವುದು ಮಂಗಳವೆಂದು ಪರಿಗಣಿಸಲಾಗುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಮನೆಯಲ್ಲಿ ತುಳಸಿ ಗಿಡವಿದ್ದರೆ, ಅದಕ್ಕೆ ಪ್ರತಿ ದಿನ ಬೆಳಗ್ಗೆ ನೀರನ್ನು ಹಾಕಬೇಕು. ಸಂಜೆ ದೀಪವನ್ನು ಹಚ್ಚಬೇಕು.
ತುಳಸಿ ಗಿಡಕ್ಕೆ ಭಾನುವಾರ, ಅಮವಾಸ್ಯೆ, ಏಕಾದಶಿಯಂದು ನೀರನ್ನು ಹಾಕಬಾರದು. ಭಾನುವಾರ ತುಳಸಿ ಎಲೆಗಳನ್ನು ಕೀಳಬಾರದು. ಊಟವಾದ ಮೇಲೆ ಮಧ್ಯಾಹ್ನದ ನಂತ್ರ ಕೂಡ ತುಳಸಿ ಎಲೆಗಳನ್ನು ಕೀಳಬಾರದು.
ತುಳಸಿ ಗಿಡದ ಜೀವಿತಾವಧಿ ಸಾಮಾನ್ಯವಾಗಿ 2 ರಿಂದ 4 ವರ್ಷಗಳು. ಸಸ್ಯವು ಒಣಗಿದಾಗ, ಅದನ್ನು ನದಿಗೆ ಎಸೆಯಬೇಕು. ಒಣಗಿದ ತುಳಸಿ ಗಿಡವು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ವಿಷ್ಣು, ಕೃಷ್ಣ, ಹನುಮಂತನಿಗೆ ತುಳಸಿ ಎಲೆಯನ್ನು ಅರ್ಪಿಸಬೇಕು. ತುಳಸಿ ಎಲೆಗಳನ್ನು ಉಗುರುಗಳಿಂದ ಎಂದಿಗೂ ಕೀಳಬಾರದು. ಗಾಯವಾಗದಂತೆ ಬೆರಳುಗಳ ತುದಿಯಿಂದ ಕೀಳಬೇಕು.
ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಆಹಾರದಲ್ಲಿ ಹಾಕಬೇಕು. ಇದು ಗ್ರಹಣದ ದೋಷವನ್ನು ಕಡಿಮೆ ಮಾಡುತ್ತದೆ. ಆಹಾರ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತದೆ.