alex Certify ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ.

*ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೂದಲಿಗೆ ಹೇರ್ ಪ್ಯಾಕ್ ಬಳಸಬೇಡಿ. ಇದರಿಂದ ಅವರಿಗೆ ಶೀತ, ಕಫವಾಗಬಹುದು.

*ಗರ್ಭಿಣಿಯರು ತಮ್ಮ ಪಾದಗಳನ್ನು ಬೆಚ್ಚಗೆ ಇರಿಸಬೇಕು, ಇಲ್ಲವಾದರೆ ಥಂಡಿಯಿಂದಾಗಿ ಶೀತ, ಕಫ ಕಟ್ಟಿಕೊಳ್ಳಬಹುದು. ಹಾಗಾಗಿ ತಮ್ಮ ಪಾದಗಳನ್ನು ಕವರ್ ಮಾಡಿಕೊಳ್ಳಿ.

*ಹೊರಗಿನ ಗಾಳಿಯಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾ, ವೈರಸ್ ಗಳು ಇರುತ್ತದೆ. ಹಾಗಾಗಿ ಗರ್ಭಿಣಿಯರು ಹೊರಗಡೆ ಹೋಗುವುದರಿಂದ ಸೋಂಕಿಗೆ ತುತ್ತಾಗಬಹುದು. ಆದಕಾರಣ ಮನೆಯ ಒಳಗಡೆ ಇರಿ.

*ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ಹಣ್ಣು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ.

*ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಸರಿಯಾಗಿ ನೀರನ್ನು ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...