ದಿನನಿತ್ಯದ ಆಹಾರದಲ್ಲಿ ನಾವು ಸೇವಿಸಲೇಬೇಕಾದ ಐದು ಬಹು ಮುಖ್ಯ ಪದಾರ್ಥಗಳನ್ನು ತಿಳಿಯೋಣ. ಇದನ್ನು ಬಳಸುವುದರಿಂದ ಹಲವಾರು ರೋಗಗಳಿಂದ ನಾವು ದೂರವಿರಬಹುದು ಎಂಬ ಕಾರಣಕ್ಕೆ ಅವುಗಳನ್ನು ನಿತ್ಯ ಸೇವಿಸುವ ಡಯಟ್ ಚಾರ್ಟ್ ನಲ್ಲಿ ಸೇರಿಸಿ.
ನಿಮ್ಮ ಡಯಟ್ ನಲ್ಲಿ ಎರಡು ಎಲೆ ತುಳಸಿಗೆ ಜಾಗವಿರಲಿ. ಚಹಾ ಕುದಿಯುವಾಗ ಇವುಗಳನ್ನು ಹಾಕಿ ಕುದಿಸಿ ಕುಡಿಯಿರಿ. ನಿತ್ಯ ಇದನ್ನು ಬಳಸುವುದರಿಂದ ಕ್ಯಾನ್ಸರ್ ನಿಂದ ದೂರವಿರಬಹುದು.
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬುದು ಹಳೆಯ ಕಾಲದ ಉಕ್ತಿ. ಇದನ್ನು ದಿನಕ್ಕೊಂದರಂತೆ ಸೇವಿಸಿ. ಇದು ದುಬಾರಿ ಎನಿಸಿದರೆ ಇದರ ಬದಲು ನೆಲ್ಲಿಕಾಯಿ ತಿನ್ನಿ. ಇದರಲ್ಲೂ ದೇಹಕ್ಕೆ ಅತ್ಯುತ್ತಮ ವಿಟಮಿನ್ ಗಳಿವೆ.
ಪ್ರತಿದಿನ ನಿಂಬೆಹಣ್ಣಿನ ಜ್ಯೂಸ್ ಇಲ್ಲವೇ ಆಹಾರದ ರೂಪದಲ್ಲಿ ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ತೂಕ ಇಳಿಕೆಗೂ ಇದು ಸಹಕಾರಿ. ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರಿಗೆ ಲಿಂಬೆರಸ ಬೆರೆಸಿ ಕುಡಿಯಿರಿ.
ಹಾಲನ್ನು ಪರಿಪೂರ್ಣ ಆಹಾರ ಎಂದು ಪರಿಗಣಿಸುತ್ತಾರೆ. ಹಾಗಾಗಿ ದಿನನಿತ್ಯ ಒಂದು ಲೋಟ ಹಾಲು ಕುಡಿಯಿರಿ. ಇದರಿಂದ ಮೂಳೆಯೂ ಗಟ್ಟಿಯಾಗುತ್ತದೆ. ದೇಹಕ್ಕೆ ಬೇಕಿರುವ ಪೌಷ್ಟಿಕಾಂಶಗಳನ್ನೂ ನೀಡುತ್ತದೆ. ದಿನಕ್ಕೆ ಮೂರು ಲೀಟರ್ ನೀರು ಕುಡಿಯಿರಿ. ಒಮ್ಮೆಗೆ ಒಂದು ಲೋಟದಂತೆ ಗಂಟೆಗೊಮ್ಮೆ ನೀರು ಕುಡಿಯುತ್ತಿರಿ.