ತ್ವಚೆಯ ಸೌಂದರ್ಯ ಚಿಕಿತ್ಸೆಗೆ ವಾರಾಂತ್ಯವನ್ನು ಮೀಸಲಿಡುತ್ತಿದ್ದೀರಾ. ಅದರಲ್ಲೂ ಸದಾ ಯೌವನ ಕಾಪಾಡಿಕೊಳ್ಳಲು ಏನೇನೋ ಚಿಕಿತ್ಸೆಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಿ. ಈ ಟಿಪ್ಸ್ ಫಾಲೋ ಮಾಡಿ.
* ಮುಖಕ್ಕೆ ಮತ್ತು ದೇಹಕ್ಕೆ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯ ಮರ್ದನ ಮಾಡಿ. ಈ ಎಣ್ಣೆಗಳು ವಿಟಮಿನ್, ಮಿನರಲ್ ಮತ್ತು ಫ್ಯಾಟಿ ಆಸಿಡ್ ನ ಅಂಶಗಳನ್ನು ಹೊಂದಿರುತ್ತದೆ. ಇದರಿಂದ ಸುಕ್ಕು ರಹಿತ ತ್ವಚೆಯನ್ನು ಹೊಂದಲು ಸಾಧ್ಯ.
* ಲೋಳೆರಸವನ್ನು ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿ ಬೆಳಗ್ಗೆ ಮುಖವನ್ನು ತೊಳೆಯುವುದರಿಂದ ಚರ್ಮದ ಸುಕ್ಕು ನಿವಾರಣೆಗೊಂಡು ತ್ವಚೆಯು ಲವಲವಿಕೆಯಿಂದ ಕೂಡಿರುತ್ತದೆ.
* ಬಾಳೆಹಣ್ಣು ಹೇರಳ ಪೋಷಕಾಂಶಗಳನ್ನು ಒದಗಿಸುವ ಹಣ್ಣು. ಪೊಟ್ಯಾಶಿಯಂ, ವಿಟಮಿನ್ ಬಿ, ಸಿ ಮತ್ತು ಇ ಅಂಶಗಳನ್ನು ಒಳಗೊಂಡಿದೆ. ಇದು ಚರ್ಮದ ವಯಸ್ಸಿಗೆ ಕಾರಣವಾಗುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುವುದಲ್ಲದೆ ಚರ್ಮಕ್ಕೆ ತೇವಾಂಶದ ಜೊತೆಗೆ ವಿಟಮಿನ್ ಗಳನ್ನು ಪೂರೈಸಿ ಚರ್ಮದ ವಯಸ್ಸಾಗುವಿಕೆಯನ್ನು ಮುಂದೂಡುತ್ತದೆ. ಬಾಳೆ ಹಣ್ಣು ತಿನ್ನುವುದು ಅಥವಾ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಶುದ್ಧ ನೀರಿನಿಂದ ತೊಳೆದ ಮುಖದ ಮೇಲೆ ತೆಳುವಾದ ಪೇಸ್ಟ್ ರೂಪದಲ್ಲಿ ಹಚ್ಚಿ 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
* ಕೊಬ್ಬರಿ ಹಾಲನ್ನು ಕುಡಿಯುವುದು ಅಥವಾ ಮುಖಕ್ಕೆ ಲೇಪನ ಮಾಡಿ. ಕೊಬ್ಬರಿ ಹಾಲಿನಲ್ಲಿರುವ ಕಾಪರ್ ಮತ್ತು ವಿಟಮಿನ್ ಸಿ ಅಂಶವು ಚರ್ಮದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಚರ್ಮದ ಸುಕ್ಕನ್ನು ನಿವಾರಿಸುತ್ತದೆ ಮತ್ತು ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ.