ಮದುವೆ ಒಂದು ವಿಶೇಷವಾದ ದಿನ. ಅಂದು ಚೆನ್ನಾಗಿ ಕಾಣಬೇಕೆಂದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಆಸೆ. ಅಂತವರು ಮದುವೆಗೂ ಮೊದಲು ಈ ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿದರೆ ಸುಂದರವಾದ ಮೈಕಾಂತಿಯನ್ನು ಪಡೆಯಬಹುದು.
ಮದುವೆಯ ದಿನ ಹತ್ತಿರ ಬರುತ್ತಿರುವಾಗ ನೀವು ವಿಶೇಷವಾಗಿ ನಿಮ್ಮ ಕೂದಲು ಮತ್ತು ಚರ್ಮದ ಕಡೆಗೆ ಹೆಚ್ಚು ಗಮನ ಕೊಡಬೇಕು. ನಿಮ್ಮ ಮದುವೆಗೆ ಕನಿಷ್ಠ 45 ದಿನಗಳಿರುವಾಗಲೇ ನಿಮ್ಮ ಚರ್ಮ ಮತ್ತು ಕೂದಲಿನ ಆರೈಕೆ ಶುರು ಮಾಡಿ.
ನಿಮ್ಮ ಚರ್ಮಕ್ಕೆ ಅನುಗುಣವಾಗಿ ಕ್ಲೆನ್ಸರ್, ಟೋನರ್ ಮತ್ಯು ಮಾಯಿಶ್ಚರೈಸರ್ ನ್ನು ಹಚ್ಚಿ. ಹಾಗೇ ನೈಸರ್ಗಿಕ ವಸ್ತುಗಳಾದ ಕಿತ್ತಳೆ ಸಿಪ್ಪೆ ಸ್ಕ್ರಬ್ ಅಥವಾ ಹಸಿ ಹಾಲು ಮತ್ತು ಬಾದಾಮಿ ಪುಡಿ ಸೇರಿಸಿ ಸ್ಕ್ರಬ್ ಮಾಡಿ. ಯಾಕೆಂದರೆ ಇದು ಚರ್ಮವನ್ನು ಹೆಚ್ಚು ಒಣಗಿಸುವುದಿಲ್ಲ. ಮೊಡವೆಗಳು ಮೂಡದಂತೆ ತಡೆಯುತ್ತವೆ. ಹಾಗೇ ಕೂದಲಿಗೆ ವಾರದಲ್ಲಿ 3 ಬಾರಿ ಎಣ್ಣೆ ಮಸಾಜ್ ಮತ್ತು ಕಂಡೀಷನರ್ ತಪ್ಪದೇ ಹಚ್ಚಿ. ಇದರಿಂದ ಕೂದಲು ಶೈನಿಯಾಗಿರುತ್ತದೆ.