
ಗುಜರಾತ್ ಕಚ್ಛ್ ಜಿಲ್ಲೆಯ ಭುಜ್ ಎಂಬಲ್ಲಿ ನಡೆದ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್, ಅಸೆಂಬ್ಲಿ ಸ್ಪೀಕರ್ ನೀಮಾಬೇನ್ ಆಚಾರ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದ ವಿನೋದ್ಚಾವ್ಡ್ ಹಾಗೂ ಯೋಗೇಶ್ ಗಢ್ವಿ ಉಪಸ್ಥಿತರಿದ್ದರು. ಯೋಗೇಶ್ ಗಢ್ವಿ ಪ್ರಸಿದ್ಧ ಜಾನಪದ ಗಾಯಕ, ಇವರು ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿರುವ ಸಮಯದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಅನ್ನೋ ಆರೋಪ ಇದೆ.
ಯೋಗೇಶ್ ಬೊಕ್ಸ ಎಂದೂ ಕರೆಯಲ್ಪಡುವ ಗಢ್ವಿ ಭಿಮರತ್ನ ಸಾಮ್ರಸ್ ಕನ್ಯಾ ವಿಶ್ವವಿದ್ಯಾಲಯದ ಹಾಸ್ಟೆಲ್ ಉದ್ಘಾಟನಾ ಸಮಾರಂಭದಲ್ಲಿ, ಜಾತಿನಿಂದನೆ ಮಾಡಿದ್ದಾರೆ ಅನ್ನೊ ಆರೋಪದ ಆಧಾರದ ಮೇಲೆ ಈಗ ಇವರ ವಿರುದ್ಧ ಪ್ರಕರಣವನ್ನ ದಾಖಲಿಸಲಾಗಿದೆ.
ಮಕ್ಕಳಿಗೆ ಊಟ ಮಾಡಿಸಲು ಹೆತ್ತವರಿಗೆ ಇಲ್ಲಿದೆ ಸುಲಭ ಟಿಪ್ಸ್
ಸುಮಾರು 4 ಗಂಟೆ ನಡೆದ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಬಗ್ಗೆ ಕುರಿತು ನಿಂದನಾತ್ಮಕ ಮಾತುಗಳನ್ನ ಹೇಳಿದ್ದಾರೆ ಅನ್ನೊ ಆರೋಪ ಗಾಯಕ ಯೋಗೇಶ್ ಗಢ್ವಿಯವರ ಮೇಲಿದೆ. ಇವರು ಹೇಳಿದ್ದ ಮಾತುಗಳನ್ನ ಕೇಳಿ ಅದೇ ವೇದಿಕೆ ಮೇಲಿದ್ದ ದಲಿತ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ದಲಿತ ಹಕ್ಕುಗಳ ಹೋರಾಟಗಾರ ವಿಶಾಲ್ ಗರ್ವ್ ಎಂಬುವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.