alex Certify 8X8 ಅಡಿಗಳ ಮಡಚುವ ಸ್ಟೋರ್‌ ಆರಂಭ: ಅಚ್ಚರಿ ವ್ಯಕ್ತಪಡಿಸುತ್ತಿರುವ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8X8 ಅಡಿಗಳ ಮಡಚುವ ಸ್ಟೋರ್‌ ಆರಂಭ: ಅಚ್ಚರಿ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

 

ಭಾರತದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಮಡಚಬಹುದಾದ 8 ಅಡಿಯಿಂದ 8 ಅಡಿಗಳ ಸ್ಟೋರ್ ಅನ್ನು ಪ್ರಾರಂಭಿಸಲಾಗಿದೆ. ಇದು ಒಂದು ರೀತಿಯ ಕಿಯೋಸ್ಕ್ ಆಗಿದ್ದು, ಈವೆಂಟ್‌ಗಳಿಗಾಗಿ ನಿರ್ದಿಷ್ಟ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಹೊರಾಂಗಣ ಸೆಟ್ಟಿಂಗ್ ಅಥವಾ ಮಾಲ್‌ನಲ್ಲಿ ಇದನ್ನು ಬಳಸಬಹುದಾಗಿದ್ದು ಇದರ ವಿಡಿಯೋ ವೈರಲ್‌ ಆಗಿದೆ.

ಕಿಯೋಸ್ಕ್ ಎಲ್ಇಡಿ ದೀಪಗಳೊಂದಿಗೆ ನೆಲ ಮತ್ತು ಛಾವಣಿಯೊಂದಿಗೆ ಬರುತ್ತದೆ ಮತ್ತು ಎಲ್ಲಾ ಕಡೆಗಳಲ್ಲಿ ಬ್ಯಾಕ್ಲಿಟ್ ಲೋಗೋ ಬ್ರ್ಯಾಂಡಿಂಗ್ ಹೊಂದಿದೆ. ಈ ಉತ್ಪನ್ನವನ್ನು ಅಮಿಟೋಜೆ ಇಂಡಿಯಾ ಕಳೆದ ವಾರ ಬಿಡುಗಡೆ ಮಾಡಿದೆ. ಈ ಕಿಯೋಸ್ಕ್ ಹೇಗೆ ಮಡಚಿಕೊಳ್ಳುತ್ತದೆ ಎಂಬುದರ ವಿಡಿಯೋ ಭಾರಿ ಹಿಟ್‌ ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಪೂರ್ಣ ಸ್ಟಾಲ್ ಅಥವಾ ಕಿಯೋಸ್ಕ್‌ನ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಅದು ಯಾವುದೇ ಸಾಧನಗಳ ಸಹಾಯವಿಲ್ಲದೆ ಮಡಚಿಕೊಳ್ಳುತ್ತದೆ. ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಘಟಕವನ್ನು ವಿನ್ಯಾಸಗೊಳಿಸಲಾಗಿದೆ.

ಇದು ಉದ್ಯಮ ಕ್ಷೇತ್ರಕ್ಕೆ ಒಂದು ದೈವದತ್ತ ಕೊಡುಗಡೆಯಾಗಿದೆ. ಯಾವುದಾದರೂ ಪ್ರದರ್ಶನಗಳು ಮತ್ತು ಈವೆಂಟ್‌ಗಳನ್ನು ಮಾಡಲು ಇದು ಸಹಕಾರಿಯಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...