
ಬೆಂಗಳೂರು: ನಿರಂತರವಾಗಿ ಭ್ರೂಣ ಹತ್ಯೆ ಮಾಡುತ್ತಿದ್ದ ವೈದರು ಸೇರಿ ಒಟ್ಟು 9 ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವನಂಜೇಗೌಡ, ವಿರೇಶ್, ನವೀನ್, ನಯನ್ ಹಾಗೂ ವೈದ್ಯರಾದ ಡಾ.ತುಳಸಿರಾಮ್, ಡಾ.ಚಂದನ್ ಬಲ್ಲಾಳ್, , ಮೀನಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್, ಖಾಸಗಿ ಆಸ್ಪತ್ರೆ ರಿಸಪ್ಶನಿಸ್ಟ್ ರೀಜ್ಮಾ ಬಂಧಿತ ಆರೋಪಿಗಳು.
ಭ್ರೂಣ ಹತ್ಯೆ ಪ್ರಕರಣದಲ್ಲಿ ಆರಂಭದಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಹಾಗೂ ನಯನ್ ಎಂಬುವವರನ್ನು ಬಂಧಿಸಲಾಗಿತ್ತು. ಅವರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಅವರ ಹಿಂದೆ ಚೆನ್ನೈ ಮೂಲದ ವೈದ್ಯರ ತಂಡವೇ ಇದೆ ಎಂಬುದು ಬೆಳಕಿಗೆ ಬಂದಿದೆ. ಬಂಧಿತರು ಪ್ರತಿ ತಿಂಗಳು 20-25 ಭೂಣ ಹತ್ಯೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೈಸೂರಿನ ಉದಯಗಿರಿ ಬಳಿಯ ಆಸ್ಪತ್ರೆಯೊಂದರಲ್ಲಿ ಈ ಕೃತ್ಯವೆಸಗಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.