
ಈ ಸ್ಪೆಷಲ್ ವಿಡಿಯೋವನ್ನು ಇಂಡಿಗೋ ಏರ್ಲೈನ್ಸ್ ಪೋಸ್ಟ್ ಮಾಡಿದೆ. ಭಾನುವಾರದಂದು ಪುಣೆಗೆ ಹೊರಡುತ್ತಿದ್ದ ವಿಮಾನದಲ್ಲಿ ಪರಮವೀರಚಕ್ರ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಸಂಜಯ್ಕುಮಾರ್ ಕೂಡ ಇದ್ದರು. ಸುಬೇದಾರ್ ಸಂಜಯ್ ಕುಮಾರ್ ಅಸಾಧಾರಣ ಶೌರ್ಯವನ್ನು ಗೌರವಿಸುವ ಸಲುವಾಗಿ ಅವರ ಸಾಧನೆಗಳನ್ನು ಪ್ರಯಾಣಿಕರ ಜೊತೆಯಲ್ಲಿ ಹಂಚಿಕೊಂಡಿದೆ. ರಾಷ್ಟ್ರಕ್ಕಾಗಿ ಸಂಜಯ್ ಕುಮಾರ್ ಮಾಡಿದ ಸೇವೆಯನ್ನು ಇಂಡಿಗೋ ಏರ್ಲೈನ್ಸ್ ಕೊಂಡಾಡಿದೆ.
ವಿಮಾನಯಾನ ಸಂಸ್ಥೆಯು ಈ ವಿಡಿಯೋ ಟ್ವೀಟ್ ಮಾಡಿದ್ದು, ವೀರನೊಂದಿಗೆ ನಾವಿಂದು ಹಾರುತ್ತಿದ್ದೇವೆ. ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಜಿ. ಜೀವಂತ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಎಂದು ಕೊಂಡಾಡಿದ್ದಾರೆ.