ಸೌದಿ ಅರೇಬಿಯಾವು ಪ್ರವಾಸೋದ್ಯಮ ಮತ್ತು ಆಥಿರ್ಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿದೆ. ಮರುಭೂಮಿ ಪ್ರದೇಶವನ್ನು ನಿಯೋಮ್ ಎಂಬ ಹೈಟೆಕ್ ನಗರ ಪ್ರದೇಶವಾಗಿ ಪರಿವತಿರ್ಸಲಿದೆ.
ಫ್ಯೂಚರಿಸ್ಟಿಕ್ ಮೆಗಾಸಿಟಿ ಯೋಜನೆಯಲ್ಲಿ ಜಗತ್ತಿಗೆ ತಾಜಾ ಚಿಂತನೆ ಮತ್ತು ಹೊಸ ಪರಿಹಾರಗಳ ಅಗತ್ಯವಿರುವ ಸಮಯದಲ್ಲಿ ಇದು ಬರುತ್ತಿದೆ ಎಂದು ಆ ದೇಶ ಹೇಳಿಕೊಂಡಿದೆ. ಈ ಯೋಜನೆಯು ಆಕ್ಸಾಗನ್, ಟ್ರೋಜೆನಾ ಮತ್ತು ದಿ ಲೈನ್ ಎಂಬ ಮೂರು ಉಪ ಯೋಜನೆಗಳನ್ನು ಹೊಂದಿದೆ.
ಈ ವರ್ಷ ಸೌದಿ ಅರೇಬಿಯಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ ನಿಯೋಮ್ ಸ್ಮಾರ್ಟ್ ಸಿಟಿಯಲ್ಲಿ ಪರ್ವತ ಪ್ರವಾಸೋದ್ಯಮಕ್ಕೆ ಜಾಗತಿಕ ತಾಣವೆಂದು ಹೆಸರಿಸಲಾಗಿದೆ. ತುದಿಯಲ್ಲಿ ಪ್ರವಾಸಿಗರಿಗೆ ಸ್ಕೀ ಗ್ರಾಮ, ಅಲ್ಟ್ರಾ- ಐಷಾರಾಮಿ ರೆಸಾರ್ಟ್ಗಳು, ರೀಟೇಲ್ ಸ್ಟೋರ್ಗಳು, ರೆಸ್ಟೋರೆಂಟ್ಗಳನ್ನು ಒಳಗೊಂಡಂತೆ ಹಲವಾರು ಚಟುವಟಿಕೆಗಳನ್ನು ಹೊಂದಿರುತ್ತದೆ. ಇದು ಮೌಂಟೇನ್ ಬೈಕಿಂಗ್ ಮತ್ತು ಕೆಲವು ಜಲ ಕ್ರೀಡೆಗಳಂತಹ ಕ್ರೀಡಾ ಚಟುವಟಿಕೆಗಳನ್ನು ಸಹ ಒದಗಿಸುತ್ತದೆ.
ಯೋಜನೆಯು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಿಯೋಮ್ನ ಮತ್ತೊಂದು ಉಪ-ಯೋಜನೆಯಾದ ಆಕ್ಸಾಗಾನ್ ಅನ್ನು “ವಿಶ್ವದ ಅತಿದೊಡ್ಡ ತೇಲುವ ಕೈಗಾರಿಕಾ ಸಂಕೀರ್ಣ’ ಎಂದು ವಿವರಿಸಲಾಗಿದೆ. ಈ ಯೋಜನೆಯು ನ್ಯೂಯಾರ್ಕ್ ನಗರದ ಗಾತ್ರಕ್ಕಿಂತ 33 ಪಟ್ಟು ಹೆಚ್ಚು ಮತ್ತು ನವೀನ ಕೈಗಾರಿಕೆಗಳನ್ನು ಆಯೋಜಿಸುತ್ತದೆ.
ಈ ನಗರವು ಇಂರ್ಟನೆಟ್ ಆಫ್ ಥಿಂಗ್ಸ್, ಕೃತಕ ಮತ್ತು ಮುನ್ಸೂಚಕ ಬುದ್ಧಿಮತ್ತೆ, ಮಾನವ-ಯಂತ್ರ ಕಲಿಕೆ ಮತ್ತು ರೊಬೊಟಿಕ್ಸ್ ಸೇರಿದಂತೆ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತದೆ.
ಲೈನ್ ನಿಯೋಮ್ ಸ್ಮಾರ್ಟ್ ಸಿಟಿಯ ಮತ್ತೊಂದು ಉಪ ಯೋಜನೆಯಾಗಿದೆ. ಇದು ಸ್ಮಾರ್ಟ್ ಲೀನಿಯರ್ ಸಿಟಿಯಾಗಿದ್ದು, ಒಂದು ಮಿಲಿಯನ್ ನಿವಾಸಿಗಳಿಗೆ ಆತಿಥ್ಯ ನೀಡಲು ಯೋಜಿಸಲಾಗಿದೆ. ನಗರಾಭಿವೃದ್ಧಿಯು ಪರಿಸರ ಸ್ನೇಹಿಯಾಗಿದ್ದು, ಬೀದಿಗಳು ಕಾರುಗಳಿಂದ ಮುಕ್ತವಾಗಿರುತ್ತವೆ ಮತ್ತು ನಿವಾಸಿಗಳು ಕೇವಲ ಐದು ನಿಮಿಷಗಳ ನಡಿಗೆಯ ಮೂಲಕ ದೈನಂದಿನ ಅಗತ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರಮುಖವಾಗಿ ಹಾರುವ ಟ್ಯಾಕ್ಸಿಗಳನ್ನು ಇಲ್ಲಿ ಬಳಸಲಾಗುತ್ತದೆ. ಹೊಸ ಸಂಚಾರ ಮಾಧ್ಯಮವನ್ನು ಪರಿಚಯಿಸಲಾಗುತ್ತದೆ.