ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಹೊಚ್ಚಹೊಸ ಹೆಸರಾದ ಫ್ಲೈಬಿಗ್ ತನ್ನ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಮಾಡಲು ಐ.ಆರ್.ಸಿ.ಟಿ.ಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ದೇಶದ ಈಶಾನ್ಯದ ಯಾವುದೇ ಊರಿಗೆ ತಾನು ಕೊಡಮಾಡುವ ವೈಮಾನಿಕ ಸೇವೆಗೆ ಟಿಕೆಟ್‌ಗಳನ್ನು ಐ.ಆರ್.ಸಿ.ಟಿ.ಸಿಯಲ್ಲಿ ಒದಗಿಸಲು ಫ್ಲೈಬಿಗ್ ಅವಕಾಶ ಮಾಡಿಕೊಟ್ಟಿದೆ.
ಗಮನಿಸಿ: ಈ ಆರ್ಥಿಕ ವ್ಯವಹಾರಗಳಿಗೆ ಬೇಕೇ ಬೇಕು ʼPAN ಕಾರ್ಡ್ʼ
“ದೇಖೋ ಅಪ್ನಾ ದೇಶ್” ಅಭಿಯಾನದಡಿ ದೇಶದ ಈಶಾನ್ಯ ಪ್ರದೇಶದ ಜೀವವೈವಿಧ್ಯ ಹಾಗೂ ಸಂಸ್ಕೃತಿಯನ್ನು ಪ್ರಮೋಟ್ ಮಾಡುವುದು ಈ ಪಾಲುದಾರಿಕೆಯ ಉದ್ದೇಶವಿದೆ. ಇದೇ ವೇಳೆ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಈಶಾನ್ಯದಲ್ಲಿ ಸಂಪರ್ಕ ಹಾಗೂ ಕನೆಕ್ಟಿವಿಟಿಗೆ ಬಲ ನೀಡುವ ಉದ್ದೇಶವನ್ನೂ ಸಹ ಈ ಪಾಲುದಾರಿಕೆ ಹೊಂದಿದೆ.
ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, 40 ಕಿ.ಮೀ. ವೇಗಮಿತಿ
ಭಾರತ ಸರ್ಕಾರದ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಾದ ’ಉಡಾನ್’ನ ಅಡಿ 2021ರ ಜನವರಿಯಿಂದ ತನ್ನ ಚಟುವಟಿಕೆಗಳನ್ನು ಫ್ಲೈಬಿಗ್ ಆರಂಭಿಸಿದೆ. ದೇಶದ 2-3ನೇ ಸ್ತರದ ನಗರಗಳಿಗೆ ವಿಮಾನಯಾನ ಸಂಪರ್ಕ ತಲುಪಿಸುವ ಉದ್ದೇಶದಿಂದ ಉಡಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ, ಕೋಲ್ಕತ್ತಾ ಮಹಾನಗರಗಳನ್ನು ಈಶಾನ್ಯದ ಪ್ರಮುಖ ಕೇಂದ್ರಗಳಾದ ಗೌಹಾಟಿ, ಶಿಲ್ಲಾಂಗ್, ಡಿಬ್ರೂಘಡ, ಅಗರ್ತಲಾಗಳಿಗೆ ಸಂಪರ್ಕಿಸುತ್ತಿದೆ ಫ್ಲೈಬಿಗ್.