ಹಾಸನ : ‘ಸಾಲುಮರದ ತಿಮ್ಮಕ್ಕ’ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಸಾಲುಮರದ ತಿಮ್ಮಕ್ಕ’ಗೆ ಮೈ ಕೈ ನೋವಿನಿಂದ ಜ್ವರ ಕಾಣಿಸಿಕೊಂಡಿತ್ತು, ಆದ್ದರಿಂದ ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಹಾಗೂ ಸಾಲುಮರದ ತಿಮ್ಮಕ್ಕ’ ಅವರನ್ನು ನೋಡಿಕೊಳ್ಳಲು ಹಾಸನ ಜಿಲ್ಲಾಡಳಿತವು ಇಬ್ಬರು ನರ್ಸ್ ಗಳನ್ನು ನಿಯೋಜನೆ ಮಾಡಿದೆ. ಜೂನ್ನಲ್ಲಿ ತಿಮ್ಮಕ್ಕ ಮನೆಯಲ್ಲಿ ಕಾಲು ಜಾರಿ ಬಿದ್ದು, ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಮೊದಲ ವರ್ಷದಲ್ಲಿ 10 ಆಲದ ಸಸಿಗಳನ್ನು ನೆಟ್ಟು ಬೆಳೆಸಲು ಆರಂಬಿಸಿದ ತಿಮ್ಮಕ್ಕ ದಂಪತಿ ಇಲ್ಲಿವರೆಗೂ ಅವರು 8 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಆದ್ದರಿಂದ ಅವರನ್ನು ವೃಕ್ಷಮಾತೆ ಎಂದೇ ಕರೆಯಲಾಗುತ್ತಿದೆ.