
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಆಟಗಾರ. ಫೋರ್ಬ್ಸ್ ಪಟ್ಟಿಯಲ್ಲಿ ವಾರ್ಷಿಕ 196 ಕೋಟಿ ಗಳಿಕೆಯೊಂದಿಗೆ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದ್ರೀಗ ಕೊಹ್ಲಿ ಒಂದು ವರ್ಷದಲ್ಲಿ ಗಳಿಸಿದ ಹಣದ ಮೂರು ಪಟ್ಟು ಹಣವನ್ನು ಆಟಗಾರನೊಬ್ಬ ಒಂದೇ ದಿನದಲ್ಲಿ ಗಳಿಸಿದ್ದಾನೆ.
ಅಮೆರಿಕದ ವೃತ್ತಿಪರ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಒಂದು ದಿನದಲ್ಲಿ ಸುಮಾರು 742 ಕೋಟಿ ರೂಪಾಯಿ ಗಳಿಸಿದ್ದಾರೆ. ಮೇವೆದರ್ ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಯೂಟ್ಯೂಬರ್ ಲೋಗನ್ ಪಾಲ್ ಅವರೊಂದಿಗಿನ ಫೈಟ್ ನಲ್ಲಿ ಸುಮಾರು 100 ಮಿಲಿಯನ್ ಡಾಲರ್ ಗಳಿಸಿರುವುದಾಗಿ ಮೇವೆದರ್ ಹೇಳಿದ್ದಾರೆ.
ಮೇವೆದರ್ ಮತ್ತು ಲೋಗನ್ ನಡುವೆ ನಡೆದ ಫೈಟ್ ಅಸಲಿಯಾಗಿರಲಿಲ್ಲ. ಅಮೆರಿಕದ ಬಾಕ್ಸರ್ ಮೇವೆದರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೇವೆದರ್ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅವರು ನಕಲಿ ಫೈಟ್ ನಿಂದ 100 ಮಿಲಿಯನ್ ಡಾಲರ್ ಗಳಿಸಿರುವುದಾಗಿ ಹೇಳ್ತಿದ್ದಾರೆ.
ಮೇವೆದರ್, ವೃತ್ತಿಜೀವನದಲ್ಲಿ ಇದುವರೆಗೆ ಒಂದು ಪಂದ್ಯವನ್ನೂ ಸೋತಿಲ್ಲ. 2017 ರಲ್ಲಿ ಬಾಕ್ಸಿಂಗ್ ಗೆ ನಿವೃತ್ತಿ ಘೋಷಿಸಿದ್ದಾರೆ. ಮೇವೆದರ್ ಅನೇಕ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಮೇವೆದರ್ ಬಳಿ ಖಾಸಗಿ ಜೆಟ್ ಇದೆ. ಇದರ ಬೆಲೆ 334 ಕೋಟಿ ರೂಪಾಯಿ.