ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್ಬಾಗ್ನಲ್ಲಿ ಆಗಸ್ಟ್ 8 ರಿಂದ 19ರ ವರೆಗೆ ನಡೆಯಲಿದೆ.
ಸ್ವಾತಂತ್ರೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 216ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಆಂಥೋರಿಯಂ ಹೂಗಳು, ಗುಲಾಬಿ, ಜರ್ಬೆರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್ಹಾಟ್ ಪೋಕರ್, ಆಲ್ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ ಸೇರಿ ವಿವಿಧ ಹೂಗಳ ಪ್ರದರ್ಶನ ಮಾಡಲಾಗುತ್ತಿದೆ.
ಪ್ಲವರ್ ಶೋನಲ್ಲಿ ದೊಡ್ಡವರಿಗೆ 80 ರೂ ಟಿಕೆಟ್ ಇದ್ದು, ರಜಾ ದಿನಗಳಲ್ಲಿ 100 ರೂಪಾಯಿ ನಿಗದಿಮಾಡಲಾಗಿದೆ. ಇನ್ನು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿದೆ., ಬೆಳ್ಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಪ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ಲವರ್ ಶೋ ಗೆ ಬರುವವರಿಗೆ ಶಾಂತಿನಗರದ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಟ್ರಾಫಿಕ್ ಉಂಟಾಗದಂತೆ ಮೆಟ್ರೋವನ್ನೇ ಬಳಸುವಂತೆ ಸೂಚನೆ ನೀಡಲಾಗಿದೆ.