alex Certify ಬೆಂಗಳೂರಿನ ಲಾಲ್’ಬಾಗ್ ನಲ್ಲಿ ‘ಫ್ಲವರ್ ಶೋ’ ಆರಂಭ : ಟಿಕೆಟ್ ದರ ಎಷ್ಟು..? ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಲಾಲ್’ಬಾಗ್ ನಲ್ಲಿ ‘ಫ್ಲವರ್ ಶೋ’ ಆರಂಭ : ಟಿಕೆಟ್ ದರ ಎಷ್ಟು..? ತಿಳಿಯಿರಿ

ಬೆಂಗಳೂರು : ಬೆಂಗಳೂರಿನ ಲಾಲ್’ಬಾಗ್ ನಲ್ಲಿ ಜನವರಿ 27ರ ವರೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 6 ರಿಂದ ಸಂಜೆ 6.30ರ ವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.

ಪ್ರದರ್ಶನದ ಸಮಯ

ಬೆಳಗ್ಗೆ 6 ರಿಂದ ಸಂಜೆ 6.30ರ ವರೆಗೆ

ಪ್ರವೇಶ ಶುಲ್ಕ

• ವಯಸ್ಕರಿಗೆ ₹80
• ರಜೆ ದಿನಗಳಲ್ಲಿ ₹100
• ಮಕ್ಕಳಿಗೆ ₹30
• ಸಮವಸ್ತ್ರಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್ಬಾಗ್ನಲ್ಲಿ ಇಂದಿನಿಂದ ಜನವರಿ 27ರವರೆಗೆ ನಡೆಯಲಿದೆ. ಸುಮಾರು ₹2.75 ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 217 ನೇ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಸುಮಾರು 30 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...