ಫ್ಲೋರಿಡಾದ ಪಾಮ್ ಬೀಚ್ ಕೌಮ್ಟಿ ಕಮೀಷನರ್ ಮೆಲಿಸ್ಸಾ ಮೆಕ್ ಕಿನ್ಲೆ ಜೊತೆಗೂಡಿ ಕೆಲಸ ಮಾಡುತ್ತಿರುವ ಲಿಸಾ ವಿಲ್ಸನ್, ಬೆಲ್ಲೆ ಗ್ಲೇಡ್ ನಗರದ ಮೇಯರ್ ಸ್ಟೀವ್ ವಿಲ್ಸನ್ ಅವರ ಪತ್ನಿ ಕೂಡ ಹೌದು. ಈಕೆ ಅನೇಕ ತಿಂಗಳುಗಳಿಂದ ಜನರ ಮನೆಯ ಬಾಗಿಲಿಗೆ ಹೋಗಿ, ಅವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದಾರೆ.
ಆದರೆ ತನ್ನ ಹತ್ತಿರದ ನೆಂಟರಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವರಿಕೆ ಮಾಡಲು ಆಗದೆ ಸೋತ ಲಿಸಾ, ಕೇವಲ ಮೂರು ವಾರಗಳಲ್ಲಿ, ಆರು ಮಂದಿ, ತನ್ನವರನ್ನು ಕೋವಿಡ್ ನಿಂದಾಗಿ ಕಳೆದುಕೊಂಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಈಕೆಯ ಅಂಕಲ್ ಟೈರೊನ್ ಮೋರ್ ಲ್ಯಾಂಡ್ ಅವರು ಹುಷಾರು ತಪ್ಪಿದ್ದರು. ಅವರು ತುಂಬಾ ಕೆಮ್ಮುತ್ತಿದ್ದು, ಏನನ್ನು ಸರಿಯಾಗಿ ತಿನ್ನಲು ಆಗುತ್ತಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿ ICU ಬೆಡ್ ಸಿಗಲಿಲ್ಲ. ಇಷ್ಟೇ ಅಲ್ಲ, ಯಾವುದೇ ಹತ್ತಿರದ ಆಸ್ಪತ್ರೆಯಲ್ಲಿ ಇವರಿಗೆ ಬೆಡ್ ಕೂಡ ಸಿಗಲಿಲ್ಲ. ಕೊನೆಗೆ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋದರು, ಪ್ರಯೋಜನವಾಗಲಿಲ್ಲ.
ಚಾರಣ ಪ್ರಿಯರ ತವರು ಕುಮಾರ ಪರ್ವತ
ನಂತರ ಈಕೆ ಅಜ್ಜಿ ಲಿಲ್ಲಿ ಮೋರ್ ಲ್ಯಾಂಡ್, ಕೋವಿಡ್ ಮತ್ತು ನಿಮೋನಿಯ ಬಂದು ಮರುದಿನವೇ ಅಸುನೀಗಿದರು, ಮೂರನೇ ದಿನ ಲಿಸಾ ಅವರ ಕಸಿನ್ ಒಬ್ಬರು ಮರಣ ಹೊಂದಿದ್ದರು. ಅದಾದ ಬಳಿಕ ಮತ್ತೆ ಮೂರೂ ಜನ ಕಸಿನ್ ಮುಂದಿನ ಎರಡು ವಾರಗಳಲ್ಲಿ ತೀರಿಕೊಂಡರು.
ಇಷ್ಟಾದರೂ ಲಿಸಾ ತನ್ನ ಕೆಲಸದಿಂದ ಹಿಂದೆ ಸರಿಯಲಿಲ್ಲ. ತಮಗೆ ಆದಂತೆ ಮತ್ತೊಬ್ಬರಿಗೆ ಆಗಬಾರದು ಎಂದು ಮತ್ತೊಮ್ಮೆ ಜನರ ಬಳಿಗೆ ಹೋಗಲು ಶುರುಮಾಡಿದರು. “ನನ್ನ ಮನೆಯವರು ಲಸಿಕೆ ಹಾಕಿಕೊಂಡಿದ್ದಲ್ಲಿ ಇಂದು ಬದುಕಿರುತ್ತಿದ್ದರು” ಎಂದು ಜನರಿಗೆ ಮನವರಿಕೆ ಮಾಡಲು ಪ್ರಾರಂಭಿಸಿದರು. ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು, ಏನೋ ಭಯ ಎಂದು ಅರಿತ ಲಿಸಾ, ಈ ಘಟನೆಯಾದ ಬಳಿಕ, ತನ್ನ ಸಂಬಂಧಿ ಪೈಕಿ ಸುಮಾರು ಹತ್ತು ಜನಕ್ಕೆ ಮನವರಿಕೆ ಮಾಡಿ, ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಈ ಪ್ರಯತ್ನದ ಅರಿವಿನಿಂದ ಒಬ್ಬರಾದರು ಲಸಿಕೆ ಹಾಕಿಸಿಕೊಂಡಲ್ಲಿ, ಅದು ಸಾರ್ಥಕ ಎಂದು ತಿಳಿಸಿದ್ದಾರೆ.