ಅಮೆರಿಕಾದ ಫ್ಲೋರಿಡಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ವಿಡಿಯೋ ಗೇಮ್ ಅನ್ನು ಶಿಕ್ಷಕಿ ಕಿತ್ತುಕೊಂಡರೆಂಬ ಕ್ಷುಲ್ಲಕ ಕಾರಣಕ್ಕೆ 17 ವರ್ಷದ ವಿದ್ಯಾರ್ಥಿ ಆಕೆಗೆ ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾನೆ. ಸ್ಥಳದಲ್ಲಿದ್ದವರು ರಕ್ಷಿಸದಿದ್ದರೆ ಶಿಕ್ಷಕಿಯನ್ನು ಆತ ಕೊಂದೇ ಬಿಡುತ್ತಿದ್ದ ಎಂದು ಹೇಳಲಾಗಿದೆ.
ಘಟನೆ ಫ್ಲೋರಿಡಾದ ಮಾತಂಜಾಸ್ ಹೈಸ್ಕೂಲ್ ನಲ್ಲಿ ನಡೆದಿದ್ದು, ಶಿಕ್ಷಕಿ ವಿಡಿಯೋ ಗೇಮ್ ಕಿತ್ತುಕೊಳ್ಳುತ್ತಿದ್ದಂತೆ ಆಕ್ರೋಶಗೊಂಡ ದಢೂತಿ ದೇಹದ ಈ ವಿದ್ಯಾರ್ಥಿ ಆಕೆಯನ್ನು ಜೋರಾಗಿ ತಳ್ಳಿದ್ದಾನೆ. ಅಷ್ಟೇ ಅಲ್ಲ ಆಕೆ ಮೇಲೆ ಕುಳಿತು ಮುಖದ ಮೇಲೆ ಗುದ್ದಿದ್ದಾನೆ.
ಅಷ್ಟರೊಳಗಾಗಿ ಓಡಿ ಬಂದ ಶಿಕ್ಷಕಿಯ ಸಹೋದ್ಯೋಗಿಗಳು ವಿದ್ಯಾರ್ಥಿಯನ್ನು ಎಳೆದು ಆಕೆಯನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ಕೆಲ ಮೈ ಮೂಳೆ ಮುರಿದಿತ್ತು ಎಂದು ಹೇಳಲಾಗಿದೆ. ಇದೀಗ ವಿದ್ಯಾರ್ಥಿಯನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಶಿಕ್ಷಕಿ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿರುವ ವಿಡಿಯೋ ಈಗ ವೈರಲ್ ಆಗಿದೆ.
https://twitter.com/FightHaven/status/1628989398451888128?ref_src=twsrc%5Etfw%7Ctwcamp%5Etweetembed%7Ctwterm%5E1628989398451888128%7Ctwgr%5Eab29162565b5b921e97ced48a7aab446d05a7453%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fflorida-student-beats-teacher-unconscious-for-taking-away-video-game-video-2339385-2023-02-25