
ಎಲ್ಲರೂ ಬೆಚ್ಚಿ ಬೀಳುವಂಥ ಕೃತ್ಯಗಳಿಂದ ನೆಟ್‌ನಲ್ಲಿ ಫೇಮಸ್ ಆಗಿರುವ ’ಫ್ಲಾರಿಡಾ ಮ್ಯಾನ್’ನ ಮೀಮ್‌ಗಳು ಕಥೆಗಳು ಭಾರೀ ಫೇಮಸ್ ಎನ್ನಬಹುದು.
ಇಂಥದ್ದೇ ಕೆಟಗರಿಗೆ ಸೇರುವ ಕೃತ್ಯವೊಂದರಲ್ಲಿ ಫ್ಲಾರಿಡಾದ ವ್ಯಕ್ತಿಯೊಬ್ಬ ಇಲ್ಲಿನ ಲೇಕ್ ಸಿಟಿಯ ಕ್ರಿಸ್ಲರ್ ಡಾಡ್ಜ್ ಜೀಪ್ ಡೀಲರ್‌ಶಿಪ್ ಬಳಿ ಕಾರೊಂದನ್ನು ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕದ್ದ ವಸ್ತುಗಳ ಡೀಲಿಂಗ್ ಮಾಡುವ ಆರೋಪದ ಮೇಲೆ ಈ ವ್ಯಕ್ತಿ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
BIG NEWS: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಟಾಂಗಾ ಏರಿ ವಿಧಾನಸೌಧಕ್ಕೆ ಆಗಮಿಸಿದ ’ಕೈ’ ನಾಯಕರು
ಕೊಲಂಬಿಯಾ ಕೌಂಟಿಯ ಟಿಮೋತಿ ವೋಲ್ಫೆ ಹೆಸರಿನ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಲೇಕ್ ಸಿಟಿ ಕ್ರಿಸ್ಲರ್ ಡೀಲರ್‌ಶಿಪ್‌ಗೆ ಮಾರಲು ತೆರಳಿದ್ದಾರೆ. ಈ ವೇಳೆ ಕಾರಿನ ಗುರುತಿನ ಸಂಖ್ಯೆಯ ಪರಿಶೀಲನೆ ಮಾಡಿದ ಡೀಲರ್‌ಗೆ ಅದು ಹಿಂದೊಮ್ಮೆ ಕದಿಯಲಾಗಿದ್ದ ತನ್ನದೇ ವಾಹನ ಎಂದು ತಿಳಿದು ಬಂದಿದೆ.
ಕೂಡಲೇ ಡೀಲರ್ ಪೊಲೀಸರನ್ನು ಕರೆಯಿಸಿ ಟಿಮೋತಿಯನ್ನು ಬಂಧಿಸಲು ಸಫಲರಾಗಿದ್ದಾರೆ. ತನಿಖೆಗೆ ಒಳಪಡಿಸುತ್ತಲೇ ತಾನು ಡೀಲರ್‌ಶಿಪ್‌ನಿಂದ ವಾಹನ ಕದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ ಬಳಿಕ ಟಿಮೋತಿಯ ಕೃತ್ಯ ಸೆರೆ ಸಿಕ್ಕಿದೆ. ಟಿಮೋತಿಯನ್ನು ಸದ್ಯ ಕೊಲಂಬಿಯಾ ಕೌಂಟಿಯ ಜೈಲಿನಲ್ಲಿ ಇರಿಸಲಾಗಿದೆ.