ಕಿನ್ಶಾಸಾ: ಕಾಂಗೋದ ರಾಜಧಾನಿ ಕಿನ್ಶಾಸಾದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 120 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ.
ಇಡೀ ಪ್ರದೇಶ ಕೆಸರುಮಯ ನೀರಿನಿಂದ ತುಂಬಿವೆ. ಕಿನ್ಶಾಸಾವನ್ನು ಮಟಾಡಿಯ ಮುಖ್ಯ ಸಮುದ್ರ ಬಂದರಿಗೆ ಸಂಪರ್ಕಿಸುವ N1 ಹೆದ್ದಾರಿ ಸೇರಿದಂತೆ ಮನೆಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.
ಇನ್ನೂ ಹಲವರು ನಾಪತ್ತೆಯಾಗಿದ್ದು, ಕಾಣೆಯಾದವರು ಮತ್ತು ಮೃತಪಟ್ಟವರ ಮೃತದೇಹಗಳನ್ನು ಹುಡುಕುತ್ತಿರುವುದಾಗಿ ಪ್ರಧಾನಿ ಜೀನ್-ಮೈಕೆಲ್ ಸಮಾ ಲುಕೊಂಡೆ ಹೇಳಿದ್ದಾರೆ.
ಸುಮಾರು 12 ಮಿಲಿಯನ್ ಜನರು ಪ್ರವಾಹದಿಂದ ಹಾನಿಗೊಳಗಾದ ಕಿನ್ಶಾಸಾದ 24 ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಕನಿಷ್ಟ 120 ಜನ ಮೃತಪಟ್ಟಿದ್ದಾರೆ. ಮನೆಗಳು ಮುಳುಗಿ ರಸ್ತೆಗಳು ಹಾಳಾಗಿವೆ.
Ngaliema ಪ್ರದೇಶದಲ್ಲಿ ಮೂರು ಡಜನ್ ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪಟ್ಟಣದ ಇನ್ನೊಂದು ಭಾಗದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ, ಕೆಲವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಮೇಯರ್ ಅಲಿಡ್’ಒರ್ ತ್ಶಿಬಾಂಡಾ ಹೇಳಿದ್ದಾರೆ.