ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಾಗಿರುವುದರಿಂದ ಮಕ್ಕಳೊಂದಿಗೆ ಕುಟುಂಬ ಪ್ರವಾಸಿ ತಾಣಗಳಿಗೆ ಹೋಗುತ್ತಿರುವುದು ಸಾಮಾನ್ಯ. ಹೀಗೆ ಪ್ರವಾಸಿ ತಾಣಗಳಲ್ಲಿ ಮೋಜು- ಮಸ್ತಿ ಮಾಡಲು ಹೋಗಿ ಅದೆಷ್ಟೋ ಮಕ್ಕಳು, ದುರಂತಕ್ಕೆ ಸಿಲುಕುತ್ತಿರುವ ಘಟನೆಗಳು ಪ್ರತಿ ದಿನ ವರದಿಯಾಗುತ್ತಿವೆ. ಇದರ ನಡುವೆ ಪ್ರವಾಸಕ್ಕೆ ಹೋಗಿ ಪ್ರವಾಹದಲ್ಲಿ ಸಿಲುಕಿದ್ದ ತಂದೆ-ಮಗನನ್ನು ಕುಟುಂಬವೊಂದು ಹೇಗೆ ಪ್ರಯಾಸಪಟ್ಟು ರಕ್ಷಿಸಿದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಪ್ರವಾಸಕ್ಕೆ ಹೋದ ಕುಟುಂಬವೊಂದು ಸಮುದ್ರದಲ್ಲಿ ಇಳಿದಿದೆ. ಕ್ಷಣಾರ್ಧದಲ್ಲೇ ನೀರು ಏಕಾಏಕಿ ಏರಲಾರಂಭಿಸಿದೆ. ಅಲೆಗಳು ಅಪ್ಪಳಿಸಲು ಆರಂಭಿಸಿದೆ. ತಕ್ಷಣ ಎಚ್ಚೆತ್ತ ಕೆಲವರು ಸಮುದ್ರದ ಕಲ್ಲುಗಳ ಮೇಲೆ ಕಾಲಿಟ್ಟು ಹೇಗೋ ದಡ ಸೇರಲು ಯತ್ನಿಸಿದ್ದಾರೆ.
ಆದರೆ ವೇಗವಾಗಿ ಬಂದು ಅಪ್ಪಳಿಸುವ ಅಲೆ ಅವರನ್ನು ಹಿಂದಕ್ಕೆ ಸೆಳೆದಿದೆ. ಆದರೂ ಕಷ್ಟಪಟ್ಟು ಹೇಗೋ ಕೆಲವರು ದಡ ಸೇರಿದ್ದಾರೆ. ಆದರೆ ತಂದೆ ಹಾಗೂ ಪುಟ್ಟ ಬಾಲಕನೊಬ್ಬ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಕಾಲಿಗೆ ಬಂದು ಅಪ್ಪಳಿಸುತ್ತಿರುವ ಅಲೆಗಳ ಮಧ್ಯೆ ನಿಂತ ತಂದೆ, ಮಗನನ್ನು ಕೈಎಲ್ಲಿ ಎತ್ತಿಕೊಂಡು ನಿಂತಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ದಡದ ಮೇಲಿದ್ದ ಕುಟುಂಬ ಸದಸ್ಯರು ತಾವು ಧರಿಸಿದ್ದ ಜಾಕೆಟ್, ಶರ್ಟ್, ದುಪ್ಪಟ್ಟ, ಪ್ಯಾಂಟ್ ಗಳನ್ನು ತೆಗೆದು ಅವುಗಳನ್ನೇ ಹಗ್ಗವನ್ನಾಗಿಸಿ ಪ್ರವಾಹದಲ್ಲಿ ಸಿಲುಕಿದ್ದ ತಂದೆ-ಮಗನನ್ನು ಹರಸಾಹಸ ಪಟ್ಟು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದ್ದಾರೆ.
ನದಿಯಲ್ಲಿ ಸಿಲುಕಿರುವ ತಂದೆ-ಮಗನ ರಕ್ಷಣೆ ಮಾಡುವ ಕುಟುಂಬವೊಂದರ ವೈರಲ್ ಆಗಿರುವ ಈ ಹಳೆಯ ವಿಡಿಯೋ ನಿಜಕ್ಕೂ ಮೈ ಜುಮ್ ಎನ್ನುವಂತಿದೆ.