ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಎಲ್ಲರಿಗೂ ತಿಳಿದಿದೆ. ಜನರು ಶಾಪಿಂಗ್ ಮಾಡಲು ಈ ಪ್ಲಾಟ್ ಫಾರ್ಮ್ ಬಳಸ್ತಾರೆ. ಎಲೆಕ್ಟ್ರಾನಿಕ್ ಸಾಧನಗಳಿಂದ ಹಿಡಿದು ಪಡಿತರ ವಸ್ತುಗಳವರೆಗೆ ಎಲ್ಲವೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆದ್ರೀಗ ಫ್ಲಿಪ್ಕಾರ್ಟ್ನಲ್ಲಿ ಅಗ್ಗವಾಗಿ ವಿಮಾನ ಟಿಕೆಟ್ ಬುಕ್ಕಿಂಗ್ ಕೂಡ ಮಾಡಬಹುದು.
ದೇಶೀಯ ವಿಮಾನಗಳಿಗೆ ವಿಶೇಷ ಕೊಡುಗೆ ನೀಡಲಾಗಿದೆ. ದೇಶೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಮೇಲೆ ಪ್ರಯಾಣಿಕರಿಗೆ 2,500 ರೂಪಾಯಿವರೆಗೆ ರಿಯಾಯಿತಿ ಸಿಗ್ತಿದೆ. ಈ ಆಫರ್ ಲಾಭ ಪಡೆಯಲು ಟಿಕೆಟ್ ಬುಕಿಂಗ್ ವೇಳೆ ‘FKDOM’ ಕೋಡ್ ಬಳಸಬೇಕು.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿದ್ರೆ ಶೇಕಡಾ 5ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಮೊದಲ ಬಾರಿಗೆ ಟಿಕೆಟ್ ಬುಕ್ಕಿಂಗ್ ಮಾಡುವಾಗ 5 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗಲಿದೆ.
ಈ ಆಫರ್ನಲ್ಲಿ ಯಾವುದೇ ಕನಿಷ್ಠ ಬುಕಿಂಗ್ ಮೊತ್ತದ ಮಿತಿಯಿಲ್ಲ. ದೇಶೀಯ ವಿಮಾನಗಳಲ್ಲಿ 1000 ರೂಪಾಯಿ ರಿಯಾಯಿತಿ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ 5,000 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಫ್ಲಿಪ್ಕಾರ್ಟ್ ಮತ್ತು ಇಕ್ಸಿಗೋ ಮಧ್ಯೆ ಒಪ್ಪಂದವಾಗಿದೆ. ವಿಮಾನದ ಟಿಕೆಟ್ ಕಾಯ್ದಿರಿಸಲು, ಮೊದಲು ಫೋನ್ನಲ್ಲಿ ಫ್ಲಿಪ್ಕಾರ್ಟ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ಇಲ್ಲವೆ ಫ್ಲಿಪ್ಕಾರ್ಟ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ವಿಮಾನದ ಫೋಟೋ ಕಾಣುತ್ತದೆ. ಅದರ ಅಡಿಯಲ್ಲಿ ‘ಫ್ಲೈಟ್’ ಅಥವಾ ‘ಟ್ರಾವೆಲ್’ ಎಂದು ಬರೆಯಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಿಯಾಯಿತಿ ಕೋಡ್ ಬಳಸಲು ವಿವರಗಳನ್ನು ಭರ್ತಿ ಮಾಡಬೇಕು. ನಂತ್ರ ಕೈಗೆಟುಕುವ ಬೆಲೆಯಲ್ಲಿ ಬುಕಿಂಗ್ ಪೂರ್ಣಗೊಳಿಸಬೇಕು.