ಹೊಸ ಮೊಬೈಲ್ ಫೋನ್ ಖರೀದಿಸುವ ಪ್ಲಾನ್ ನಲ್ಲಿದ್ದು, ಹಳೆ ಮೊಬೈಲ್ ಏನ್ಮಾಡ್ಬೇಕು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮೊಬೈಲ್‌ಗಳನ್ನು ಸಹ ನೀವು ಮಾರಾಟ ಮಾಡಬಹುದು. ಫ್ಲಿಪ್‌ಕಾರ್ಟ್ ಹಳೆಯ ಸ್ಮಾರ್ಟ್‌ಫೋನ್‌ಗಳಿಗಾಗಿ ಸೇಲ್ ಬ್ಯಾಕ್ ಸ್ಕೀಮ್ ಪ್ರಾರಂಭಿಸಿದೆ.
ಜನರು ಬಳಸದ ಸ್ಮಾರ್ಟ್‌ಫೋನ್‌ಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಮಾಡಿ ಹಣ ಪಡೆಯಬಹುದು. ಪ್ರಸ್ತುತ, ಫ್ಲಿಪ್‌ಕಾರ್ಟ್ ಈ ಯೋಜನೆಯನ್ನು ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಪರಿಚಯಿಸಿದೆ. ಫ್ಲಿಪ್‌ಕಾರ್ಟ್‌ನ ಈ ಯೋಜನೆಯನ್ನು ದೆಹಲಿ, ಮುಂಬೈ, ಕೋಲ್ಕತ್ತಾ, ಪಾಟ್ನಾ ಸೇರಿದಂತೆ ದೇಶದ 1700 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಪ್ರಾರಂಭಿಸಲಾಗಿದೆ.
ಗ್ರಾಹಕರು ಎಲ್ಲ ಬ್ರಾಂಡ್ ಸ್ಮಾರ್ಟ್ಫೋನ್ ಗಳನ್ನು ಇಲ್ಲಿ ಮಾರಾಟ ಮಾಡಬಹುದು. ಹಳೆಯ ಮತ್ತು ಬಳಕೆಯಾಗದ ಫೋನ್‌ಗಳಿಂದ ಇ-ತ್ಯಾಜ್ಯ ಕಡಿಮೆಯಾಗುತ್ತದೆ ಎಂದು ಕಂಪನಿ ಹೇಳಿದೆ.
ಫ್ಲಿಪ್‌ಕಾರ್ಟ್ ಸೇಲ್ ಬ್ಯಾಕ್ ಸ್ಕೀಮ್‌ನಲ್ಲಿ ಯಾವುದೇ ಹಳೆಯ ಫೋನ್ ಮಾರಾಟ ಮಾಡಬಹುದು. ಅದಕ್ಕಾಗಿ ಫ್ಲಿಪ್‌ಕಾರ್ಟ್ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಫೋನ್ ಬ್ರ್ಯಾಂಡ್, ಮಾಡೆಲ್ ಇತ್ಯಾದಿಗಳ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಪ್ರಶ್ನೆಗಳಿಗೆ ಉತ್ತರಿಸಿದ 48 ಗಂಟೆಗಳ ಒಳಗೆ ಕಂಪನಿಯ ಉದ್ಯೋಗಿಗಳು ನಿಮ್ಮ ಮನೆಗೆ ಬರ್ತಾರೆ. ಫೋನ್ ಪರಿಶೀಲಿಸಿದ ನಂತರ ಗಿಫ್ಟ್ ವೋಚರ್ ನೀಡುತ್ತಾರೆ. ಈ ಗಿಫ್ಟ್ ವೋಚರ್ ಮೂಲಕ ಫ್ಲಿಪ್‌ಕಾರ್ಟ್‌ನಿಂದ ಯಾವುದೇ ವಸ್ತುವನ್ನು ನೀವು ಖರೀದಿಸಬಹುದು.