ಹಬ್ಬದ ಋತು ಶುರುವಾಗ್ತಿದೆ. ಎಲ್ಲ ಕಂಪನಿಗಳು ಭರ್ಜರಿ ಆಫರ್ ಹೊತ್ತು ತಂದಿವೆ. ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 3 ರಿಂದ ಆರಂಭವಾಗಲಿದೆ. ಈ ಮಾರಾಟದಲ್ಲಿ ಆಫರ್‌ಗಳ ಸುರಿಮಳೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್ ಟಿವಿಗಳವರೆಗೆ ಎಲ್ಲವೂ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗಲಿದೆ. ಫ್ಲಿಪ್ಕಾರ್ಟ್ ತನ್ನ ಪ್ಲಸ್ ಸದಸ್ಯರಿಗೆ ಬಿಗ್ ಬಿಲಿಯನ್ ಡೇಸ್ ಸೇಲನ್ನು ಅಕ್ಟೋಬರ್ 2 ರಿಂದಲೇ ಶುರು ಮಾಡ್ತಿದೆ. ಈ ಸಂದರ್ಭದಲ್ಲಿ ಕೆಲ ಹೊಸ ಉತ್ಪನ್ನಗಳ ಬಿಡುಗಡೆಯಾಗಲಿದೆ.
ಥಾಮ್ಸನ್ ಬ್ರಾಂಡ್ ನ ಟಿವಿ ಹಾಗೂ ವಾಷಿಂಗ್ ಮಷಿನ್ ಗೆ ಸಾಕಷ್ಟು ರಿಯಾಯಿತಿ ಸಿಗ್ತಿದೆ. ಥಾಮ್ಸನ್ ಆಂಡ್ರಾಯ್ಡ್ ಮತ್ತು OATH ಪ್ರೊ 32 ಇಂಚಿನ ಟಿವಿ ಮೇಲೆ ಭಾರಿ ರಿಯಾಯಿತಿ ಸಿಗ್ತಿದೆ. ಕೇವಲ 12,999 ರೂಪಾಯಿಗೆ ಖರೀದಿ ಮಾಡಬಹುದು. ಆಕ್ಸಿಸ್ ಅಥವಾ ಐಸಿಐಸಿಐ ಕಾರ್ಡ್ ದಾರರಿಗೆ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಥಾಮ್ಸನ್ OATH ಪ್ರೊ 55-ಇಂಚಿನ ಅಲ್ಟ್ರಾ ಹೆಚ್ಡಿ ಸ್ಮಾರ್ಟ್ ಟಿವಿ ಮೇಲೆ ಬಂಪರ್ ರಿಯಾಯಿತಿ ಇದೆ. 55 ಇಂಚಿನ ಟಿವಿಯನ್ನು 36,999 ರೂಪಾಯಿಗೆ ಖರೀದಿ ಮಾಡಬಹುದು.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಥಾಮ್ಸನ್ ನ ವಾಷಿಂಗ್ ಮೆಷಿನ್ ಕೂಡ ರಿಯಾಯಿತಿ ದರದಲ್ಲಿ ಲಭ್ಯವಿದೆ. ಥಾಮ್ಸನ್ ನ ವಾಷಿಂಗ್ ಮಷಿನ್ ಕೇವಲ 6,999 ರೂಪಾಯಿಗೆ ಸಿಗಲಿದೆ. ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ಪಡೆಯಬಹುದು. ಇಯರ್ ಫೋನ್, ಗೇಮಿಂಗ್ ಮಾನಿಟರ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್, ಫಿಟ್ನೆಸ್ ಬ್ಯಾಂಡ್, ಹೆಡ್ ಫೋನ್ ಹಲವು ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗಲಿವೆ.