ಬೀಜಿಂಗ್: ಚೀನಾದಲ್ಲಿ ಕೊರೋನಾ ಸೋಂಕು ಉಲ್ಭಣಗೊಂಡ ಪರಿಣಾಮ ಹಲವು ಪ್ರದೇಶಗಳಲ್ಲಿ ಮತ್ತೆ ನಿರ್ಬಂಧ ಹೇರಲಾಗಿದೆ.
ಸೋಂಕು ಕಡಿಮೆಯಾದ ನಂತರ ಅನೇಕ ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಹಂತ ಹಂತವಾಗಿ ವಿವಿಧ ಚಟುವಟಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಚೀನಾದಲ್ಲಿ ಪ್ರವಾಸಿಗರಿಂದ ಸೋಂಕು ಒಮ್ಮೆಲೆ ಉಲ್ಬಣಗೊಂಡಿದೆ. ಇದರಿಂದಾಗಿ ವಾಯುವ್ಯ ಮತ್ತು ಉತ್ತರ ಭಾಗದಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಮನರಂಜನಾ ತಾಣಗಳ ನಿರ್ಬಂಧ ವಿಧಿಸಿದ್ದು, ಶಾಲೆ ಬಂದ್ ಮಾಡಿ, ಲಾನ್ಸೋ, ಕ್ಸಿಯಾನ್ ಪ್ರಾಂತ್ಯಗಳಲ್ಲಿ ವಿಮಾನಯಾನ ರದ್ದುಪಡಿಸಲಾಗಿದೆ. ಏಕಾಏಕಿ ಉಲ್ಬಣಗೊಂಡ ಕೊರೋನಾ ನಿಯಂತ್ರಣಕ್ಕೆ ಮತ್ತೆ ಬಿಗಿಕ್ರಮಕೈಗೊಳ್ಳಲಾಗಿದೆ.