ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಂದ ಪ್ರಯಾಗ್ ರಾಜ್ ಗೆ ಸಂಚರಿಸುವ ವಿಮಾನಗಳ ಟಿಕೆಟ್ ದರದಲ್ಲಿ ಭಾರಿ ಏರಿಕೆಯಾಗಿದೆ.
ರೈಲುಗಳ ಬುಕ್ಕಿಂಗ್ ನಲ್ಲಿಯೂ ಹೆಚ್ಚಳ ಆಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಂದ ಪ್ರಯಾಗ್ ರಾಜ್ ಗೆ ಸಂಚರಿಸುವ ವಿಮಾನಗಳ ಬುಕಿಂಗ್ ನಲ್ಲಿ ಭಾರಿ ಏರಿಕೆ ಆಗಿದೆ. ಬೆಂಗಳೂರು ಮತ್ತು ಪ್ರಯಾಗ್ ರಾಜ್ ನಡುವಿನ ವಿಮಾನ ಟಿಕೆಟ್ ದರ ಶೇಕಡ 89 ರಷ್ಟು ಹೆಚ್ಚಳವಾಗಿದ್ದು, 11,158 ರೂಪಾಯಿ ಆಗಿದೆ.
ದೆಹಲಿಯಿಂದ ಪ್ರಯಾಗ್ ರಾಜ್ ಗೆ ತೆರಳುವ ವಿಮಾನ ದರದಲ್ಲಿ ಶೇಕಡ 21ರಷ್ಟು ಏರಿಕೆಯಾಗಿ 5748 ರೂಪಾಯಿಗೆ ತಲುಪಿದೆ. ಮುಂಬೈ –ಪ್ರಯಾಗ್ ರಾಜ್ ನಡುವಿನ ವಿಮಾನದ ಶೇಕಡ 13ರಷ್ಟು ಏರಿಕೆಯಾಗಿದ್ದು, 6381 ರೂ.ಗೆ ತಲುಪಿದೆ.
ಭೋಪಾಲ್ ಮತ್ತು ಪ್ರಯಾಗ್ ರಾಜ್ ವಿಮಾನ ಟಿಕೆಟ್ ದರ 2977 ರೂ. ಇತ್ತು. ಈಗಿನ ದರ 17,796 ರೂಪಾಯಿಗೆ ಏರಿಕೆಯಾಗಿದೆ. ಅಹಮದಾಬಾದ್ –ಪ್ರಯಾಗ್ ರಾಜ್ ನಡುವಿನ ದರ ಶೇಕಡ 41ರಷ್ಟು ಏರಿಕೆಯಾಗಿದ್ದು, 10,364ರೂ.ಗೆ ತಲುಪಿದೆ.