ವಿಮಾನದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಮಯ ಉಳಿಸಲು ಅನೇಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ವಿಮಾನದಲ್ಲಿ ಪ್ರಯಾಣ ಬೆಳೆಸುವ ಕೆಲವರಿಗೆ, ವಿಮಾನದ ನಿಯಮಗಳು ತಿಳಿದಿಲ್ಲ. ವಿಮಾನದಲ್ಲಿ ಕೆಲ ಶಬ್ಧಗಳನ್ನು ಹೇಳಬಾರದು. ವಿಮಾನ ಸಿಬ್ಬಂದಿ ಮುಂದೆ ಈ ಶಬ್ಧ ಹೇಳಿದ್ರೆ ಕಠಿಣ ಶಿಕ್ಷೆ, ದಂಡ ವಿಧಿಸಲಾಗುತ್ತದೆ.
ಹೌದು, ವಿಮಾನದಲ್ಲಿ ಸಿಬ್ಬಂದಿಯಿಂದ ಕೇಳಿ ಮದ್ಯ ಸೇವನೆ ಮಾಡಬಹುದು. ಆದ್ರೆ ವಿಮಾನ ಏರುವ ಮೊದಲು ಮದ್ಯ ಸೇವನೆ ಮಾಡುವಂತಿಲ್ಲ. ಮದ್ಯ ಸೇವನೆ ಮಾಡಿರುವ ಸಂಗತಿ ಗೊತ್ತಾದ್ರೆ ವಿಮಾನದಲ್ಲಿ ಪ್ರವೇಶವಿಲ್ಲ. ಮಧ್ಯದಲ್ಲಿ ಗೊತ್ತಾದ್ರೆ ಸಮೀಪದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿ, ಪ್ರಯಾಣಿಕರನ್ನು ಇಳಿಸಲಾಗುತ್ತದೆ.
ಇದೇ ಕಾರಣಕ್ಕೆ ವಿಮಾನದಲ್ಲಿ ಎಂದೂ ನಾನು ಮದ್ಯಪಾನ ಮಾಡಿದ್ದೇನೆ ಎಂಬ ಶಬ್ಧವನ್ನು ಹೇಳಬಾರದು. ಒಂದು ವೇಳೆ ನೀವು ತಮಾಷೆಗೆ ಹೇಳಿದ ಸಂಗತಿಯನ್ನು ಸಿಬ್ಬಂದಿ ಗಂಭೀರವಾಗಿ ತೆಗೆದುಕೊಂಡರೆ ಸಮಸ್ಯೆಯಾಗುತ್ತದೆ.
ಮದ್ಯಪಾನ ಮಾಡಿದ್ದೀರಿ ಎಂಬ ಸಂಗತಿ ಗೊತ್ತಾದ್ರೆ, ಉಳಿದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣ ಹೇಳಿ ನಿಮ್ಮನ್ನು ಇಳಿಸಲಾಗುತ್ತದೆ. ಪ್ರಯಾಣಿಕರ ವಿರುದ್ಧ ದೂರು ದಾಖಲಾಗುತ್ತದೆ. 8000 ಪೌಂಡ್ ದಂಡ ಹಾಗೂ 3 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ.
ಇಲ್ಲವೆ ಅಶಿಸ್ತಿನ ಪ್ರಯಾಣಿಕರ ಪಟ್ಟಿಯಲ್ಲಿ ಸೇರಿಸಿ, ಮುಂದೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ಹಾಗಾಗಿ ವಿಮಾನ ಏರಿದ ನಂತ್ರ ಅಪ್ಪಿತಪ್ಪಿಯೂ, ತಮಾಷೆಗಾಗಿಯೂ ವಿಮಾನ ಸಿಬ್ಬಂದಿ ಮುಂದೆ ನಾನು ಮದ್ಯಪಾನ ಮಾಡಿದ್ದೇನೆ ಎಂಬ ವಿಷ್ಯ ಹೇಳಬೇಡಿ.