ಕೊಯಮತ್ತೂರು: ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಅಮಿತೇಶ್ ಬಂಧಿತ ಆರೋಪಿ. 15 ದಿನಗಳ ಹಿಂದೆ ಕೃತ್ಯವೆಸಗಿದ ಆರೋಪದ ಮೇಲೆ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತಿರುಪುರ ಜಿಲ್ಲೆಯ ಉದುಮಲಪೆಟ್ ಜೈಲಿನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತೇಶ್ ದೌರ್ಜನ್ಯದ ಬಗ್ಗೆ ದೂರು ನೀಡಿದ್ದರೂ ವಾಯುಪಡೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಛತ್ತೀಸ್ ಗಢದವರಾಗಿದ್ದು, ಮಹಿಳಾ ಅಧಿಕಾರಿ ಕೊಯಮತ್ತೂರಿನ ವಾಯುಪಡೆಯ ಆಡಳಿತ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದರು.