ಮಂಗಳೂರು: ಕರಾವಳಿ ಜಿಲ್ಲೆಗಳ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ದೆಹಲಿ -ಮಂಗಳೂರು ನಡುವೆ ನೇರ ವಿಮಾನ ಸಂಚಾರ ಶುಕ್ರವಾರ ಆರಂಭವಾಗಿದೆ.
ದೆಹಲಿ -ಮಂಗಳೂರು -ದೆಹಲಿ ಮಾರ್ಗದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿದ್ದು, ಇಂಡಿಗೋ ವಿಮಾನ ಶುಕ್ರವಾರ ಮೊದಲ ಸಂಚಾರ ಆರಂಭಿಸಿದೆ. ಶುಕ್ರವಾರ ಬೆಳಗ್ಗೆ 77 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ದೆಹಲಿಯಿಂದ ಹೊರಟು ಬೆಳಗ್ಗೆ 10:15ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಮಂಗಳೂರಿನಿಂದ 140 ಪ್ರಯಾಣಿಕರನ್ನು ಹೊತ್ತು ವಿಮಾನ 10.40 ಕ್ಕೆ ದೆಹಲಿಗೆ ಸಂಚಾರ ಆರಂಭಿಸಿದೆ.
ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಈ ವಿಮಾನ ಸಂಚಾರ ಇರಲಿದೆ. ಮಂಗಳೂರಿನಿಂದ ದೆಹಲಿ, ಚಂಡಿಗಢ, ಡೆಹ್ರಾಡೂನ್, ಲಕ್ನೋ, ಪಾಟ್ನಾ ಮೊದಲಾದ ಕಡೆಗಳಿಗೆ ತೆರಳಲು ಈ ಭಾಗದ ಜನರಿಗೆ ಅನುಕೂಲವಾಗಲಿದೆ.