
ಶಿವಮೊಗ್ಗ: ತಾಂತ್ರಿಕ ಕಾರಣದಿಂದ ಶಿವಮೊಗ್ಗ- ಹೈದರಾಬಾದ್ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ ಇದರಿಂದಾಗಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಸ್ಪೈಸ್ ಜೆಟ್ ಕಂಪನಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸಿ ಆನ್ ಆಗುತ್ತಿಲ್ಲವೆಂದು ಕಾರಣ ನೀಡಿ ವಿಮಾನ ಹಾರಾಟ ರದ್ದು ಮಾಡಲಾಗಿದೆ. ನಾಲ್ಕು ಗಂಟೆ ತಡ ಮಾಡಿ ತಾಂತ್ರಿಕ ಕಾರಣ ನೀಡಿ ವಿಮಾನ ಹಾರಾಟ ರದ್ದುಪಡಿಸಲಾಗಿದೆ.
ಹೀಗಾಗಿ ಸ್ಪೈಸ್ ಜೆಟ್ ಕಂಪನಿಯ ವಿರುದ್ಧ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 60 ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.