ನ್ಯೂಯಾರ್ಕ್: ವಿಮಾನಗಳಲ್ಲಿ ಸಾಮಾನ್ಯವಾಗಿ ಕೆಲವು ಸುರಕ್ಷತಾ ಕ್ರಮಗಳ ಬಗ್ಗೆ ಘೋಷಣೆ ಮಾಡುವುದು ಸಾಮಾನ್ಯ. ಆದರೆ ಯುನೈಟೆಡ್ ಏರ್‌ಲೈನ್ಸ್ ದೇಶೀಯ ವಿಮಾನದ ಸಿಬ್ಬಂದಿಯು ಕಳೆದುಹೋದ ಬೆಕ್ಕಿನ ಪ್ರಕಟಣೆಯನ್ನು ಮಾಡಿದ್ದು, ಇದೀಗ ವೈರಲ್ ಆಗಿದೆ.
ಡಲ್ಲಾಸ್‌ನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ದೇಶೀಯ ವಿಮಾನದ ಸಿಬ್ಬಂದಿ ಈ ಪ್ರಕಟಣೆ ಮಾಡಿದ್ದಾರೆ. ವಿಮಾನ ಹಾರುವ ಸಮಯದಲ್ಲಿ ಅದರ ಮುಂಭಾಗದಲ್ಲಿ ಬೆಕ್ಕು ಓಡಿ ಹೋಗಿರುವುದನ್ನು ಸಿಬ್ಬಂದಿ ನೋಡಿದ್ದಾರೆ. ಇದರಿಂದ ಈ ಬೆಕ್ಕಿನ ಘೋಷಣೆ ಮಾಡಿದ್ದಾರೆ.
ಘಟನೆಯ ವೀಡಿಯೊವನ್ನು ಎಬಿಸಿ 7 ಚಿಕಾಗೋದ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಯಾರದ್ದಾದರೂ ಬೆಕ್ಕು ಕಾಣೆಯಾಗಿದೆಯೇ ಎಂದು ಪ್ರಯಾಣಿಕರನ್ನು ಫ್ಲೈಟ್ ಅಟೆಂಡೆಂಟ್ ಕೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
“ಬೆಕ್ಕು ಕಾಣೆಯಾಗಿದೆಯೇ? ನಿಮ್ಮ ಬೆಕ್ಕನ್ನು ಕಳೆದುಕೊಂಡಿದ್ದೀರಾ? ನೀವು ಬೆಕ್ಕಿನೊಂದಿಗೆ ಹತ್ತಿದರೆ ಅದು ನಿಮ್ಮನ್ನು ಹುಡುಕುತ್ತಿರುವಂತೆ ಕಾಣುತ್ತಿದೆ. ಬೇಗ ಬೆಕ್ಕು ಯಾರದ್ದು ಎಂದು ಹೇಳಿ ಎಂದು ಅನೌನ್ಸ್ ಮಾಡಲಾಗಿದೆ.