ವಿಮಾನದಲ್ಲಿ ಶ್ರವಣದೋಷವುಳ್ಳ ಮಗುವಿನೊಂದಿಗೆ ಸಂಕೇತ ಭಾಷೆಯಿಂದ ವಿಮಾನದ ಸಹಾಯಕರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು ಅಟೆಂಡರ್ ಅವರ ನಡೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಮಗುವಿನ ಪೋಷಕರಾದ ಕ್ಯಾಲಿ ಮತ್ತು ಲಿಯೋ ಅವರು ಸಾಮಾಜಿಕ ಜಾಲತಾಣದನಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬವು ತಮ್ಮ ಮಗ ಲುಕಾ ಅವರೊಂದಿಗೆ ಹವಾಯಿಯನ್ ಏರ್ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು. ಫ್ಲೈಟ್ ಅಟೆಂಡೆಂಟ್ ಒಬ್ಬರು ಪೋಷಕರು ತಮ್ಮ ಮಗುವಿನೊಂದಿಗೆ ಸಂಕೇತ ಭಾಷೆಯಲ್ಲಿ ಸಂವಹನ ನಡೆಸುತ್ತಿರುವುದನ್ನು ನೋಡಿದರು.
ನಂತರ ಅವರು ಮಿಲೋ ಎಂಬ ಹೆಸರಿನ ಇನ್ನೊಬ್ಬ ಸಹಾಯಕನನ್ನು ಕರೆದರು. ಅವರು ಅಮೇರಿಕನ್ ಸಂಕೇತ ಭಾಷೆಯಲ್ಲಿ ಮಗು ಲುಕಾ ಅವರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಮಗು ತುಂಬಾ ಸಂತೋಷವಾಗಿರುವಂತೆ ತೋರಿತು ಮತ್ತು ಮಿಲೋ ಜೊತೆಗೆ ಸಂವಹನ ನಡೆಸಲು ಪ್ರಯತ್ನಿಸಿತು.
ಈ ಸಿಹಿ ಕ್ಷಣಕ್ಕಾಗಿ ಏರ್‌ಲೈನ್ಸ್ ಗೆ ಧನ್ಯವಾದ ಹೇಳಲು ದಂಪತಿಗಳಾದ ಕ್ಯಾಲಿ ಮತ್ತು ಲಿಯೊ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದಾರೆ.
ಮಗುವಿನ ಮೊದಲ ವಿಮಾನ ಪ್ರಯಾಣವನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಘಟನೆಯನ್ನು ವಿವರಿಸಿ ಧನ್ಯವಾದ ಹೇಳಿದ್ದಾರೆ.
ವಿಡಿಯೋ ನೋಡಿದ ಹಲವರು ನಾನು ಇದನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.