ರಾಜಕಾರಣಿಗಳನ್ನು ದೇವರಂತೆ ಬಿಂಬಿಸುವುದು ನಮ್ಮ ದೇಶದಲ್ಲಿ ಹೊಸ ವಿಚಾರವೇನಲ್ಲ. ಆದರೆ ಈ ಪರಿಪಾಠ ಕೆಲವೊಮ್ಮೆ ಅತಿರೇಕ ತಲುಪಿ ಭಾರೀ ಕಿರಿಕಿರಿಯೆನಿಸಿಬಿಡುತ್ತದೆ.
ಇಂಥದ್ದೇ ಘಟನೆಯೊಂದರಲ್ಲಿ, ಕೇರಳದ ಮಲಪ್ಪುರಂನ ದೇಗುಲವೊಂದರಲ್ಲಿ ನಡೆದಿದೆ. ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ’ಕೇರಳದ ದೇವರು’ ಎಂದು ಬಿಂಬಿಸಿ ಫ್ಲೆಕ್ಸ್ ಬೋರ್ಡ್ ಹಾಕಿರುವ ಚಿತ್ರ ವಿವಾದ ಸೃಷ್ಟಿಸಿದೆ.
ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ: ತಜ್ಞ ವೈದ್ಯರ ವಾರ್ನಿಂಗ್
“ದೇವರು ಯಾರೆಂದು ನೀವು ಕೇಳಿದಿರಿ. ಯಾರು ಅನ್ನ ಕೊಡುತ್ತಾರೋ ಅವರೇ ದೇವರೆಂದು ಜನ ಹೇಳಿದರು” ಎಂದು ಫ್ಲೆಕ್ಸ್ ಬೋರ್ಡ್‌ನಲ್ಲಿ ಬರೆಯಲಾಗಿದೆ. ಮುಖ್ಯ ಹೆದ್ದಾರಿಯೊಂದರ ಬಳಿ ಇರುವ ದೇಗುಲದ ಬಳಿಯೇ ಈ ಬೋರ್ಡ್ ಇದ್ದು, ಎಲ್‌ಡಿಎಫ್ ಸರ್ಕಾರದ ಪ್ರಮಾಣವಚನ ಸಮಾರಂಭವನ್ನು ಉಲ್ಲೇಖಿಸಿ ಈ ಬೋರ್ಡ್ ಹಾಕಲಾಗಿದೆ.
ಈ ಫ್ಲೆಕ್ಸ್ ಬೋರ್ಡ್ ಅನ್ನು ಸಿಪಿಎಂ ಕಾರ್ಯಕರ್ತರು ಬಲವಂತವಾಗಿ ಹಾಕಿದ್ದಾರೆಂದು ಪಚಿರಿ ಮಹಾ ವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.