alex Certify ಉಕ್ರೇನ್ ಬೆಂಬಲಿಸಿ ಆರ್ಕೆಸ್ಟ್ರಾ ಆಯೋಜಿಸಿದ ಗಾಯಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ಬೆಂಬಲಿಸಿ ಆರ್ಕೆಸ್ಟ್ರಾ ಆಯೋಜಿಸಿದ ಗಾಯಕರು

ರಷ್ಯನ್-ಬ್ರಿಟೀಷ್ ಪಿಯಾನಿಸ್ಟ್‌ ಮತ್ತು ಕಂಡಕ್ಟರ್‌ ಪೀಟ್ರ್‌‌ ಲಿಮೊನೊವ್ ನೇತೃತ್ವದಲ್ಲಿ ಸುಮಾರು 200 ಮಂದಿ ಸಂಗೀತಗಾರರು ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ಉಕ್ರೇನ್‌ ಪರ ಬೆಂಬಲವಾಗಿ ಸಂಗೀತ ನುಡಿಸಿದ್ದಾರೆ.

ಮಾರ್ಚ್ 6ರಂದು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ, ಉಕ್ರೇನ್‌ನ ರಾಷ್ಟ್ರಗೀತೆ ಹಾಡಲಾಗಿದ್ದು, ಉಕ್ರೇನ್‌ನ ಇತರ ಕಲಾವಿದರು ಕಾಂಪೋಸ್ ಮಾಡಿದ ಗಾಯನಗಳನ್ನೂ ಸಹ ನುಡಿಸಲಾಗಿದೆ. ಈ ಸಮಾರಂಭದಲ್ಲಿ ನೂರಾರು ಕಲಾವಿದರು ನೆರೆದಿದ್ದರು.

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

“ಈ ಯುದ್ಧದ ವಿರುದ್ಧ ಪ್ರತಿಭಟಿಸಲು ರಷ್ಯಾದಲ್ಲಿ ಅನೇಕ ಮಂದಿ ಕೈಲು ಸೇರುವುದನ್ನೂ ಲೆಕ್ಕಿಸದೇ ಬಂದಿದ್ದಾರೆ,” ಎಂದು ತಿಳಿಸಿದ ಲೆಮೋನೊವ್, “ನಾನು ರಷ್ಯನ್ನರಿಂದ ಈ ಎಲ್ಲಾ ಸಂದೇಶಗಳನ್ನು ಪಡೆಯುತ್ತಿದ್ದೇನೆ, ಇದಕ್ಕಾಗಿ ಧನ್ಯವಾದಗಳು ಎಂದು ಹೇಳುತ್ತಿದ್ದೇನೆ, ಏಕೆಂದರೆ ನಾನು ಅಲ್ಲಿ ಜನಿಸಿದ ವ್ಯಕ್ತಿಯಾಗಿದ್ದು, ಈ ಸಂದೇಶ ರವಾನೆ ಮಾಡಲು ಕೆಲವು ರೀತಿಯ ಅವಕಾಶವಿದೆ. ಅವರು ನಿಜವಾಗಿಯೂ ನಿರಂಕುಶ ಆಡಳಿತದಿಂದಾಗಿ ಮೌನವಾಗಿದ್ದಾರೆ. ಇದು ಬಹಳ ಭೀಕರವಾಗಿದ್ದು, ಜನರ ಧ್ವನಿಗಳನ್ನು ಹತ್ತಿಕ್ಕಲಾಗಿದೆ. ನನ್ನ ಅನೇಕ ಸ್ನೇಹಿತರು ಉಕ್ರೇನಿಯನ್ನರು ಮತ್ತು ಇನ್ನೂ ಕೈವ್‌ನಲ್ಲಿ ಕುಟುಂಬಗಳನ್ನು ಹೊಂದಿದ್ದಾರೆ ಮತ್ತು ಅವರು ಈಗ ಅನುಭವಿಸುತ್ತಿರುವುದು ಅಕ್ಷರಶಃ ನರಕವಾಗಿದೆ. ನಾವು ಅವರೊಂದಿಗೆ ನಿಲ್ಲುತ್ತೇವೆ,” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...