ಯುದ್ಧಪೀಡಿತ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಆಕಾಶದಲ್ಲಿ ಕಂಡ ಬೆಳಕು ಹಲವು ಕುತೂಹಲಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುದ್ಧ ಎದುರಿಸುತ್ತಿರುವ ಕೀವ್ ನಲ್ಲಿ ಬುಧವಾರ ರಾತ್ರಿಯಂದು ಆಕಾಶದಲ್ಲಿ ಅಗೋಚರ ಬೆಳಕು ಕಂಡಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹರಿದಾಡ್ತಿದೆ. ನಾಶವಾದ ಉಪಗ್ರಹ ಅಥವಾ ಅನ್ಯಗ್ರಹ ಜೀವಿಗಳು ಇದಕ್ಕೆ ಕಾರಣವಾಗಿರಬಹುದು ಎಂಬ ಊಹೆಯನ್ನು ಹುಟ್ಟುಹಾಕಿದೆ.
ಪತ್ರಕರ್ತೆ ಮತ್ತು ಬ್ಲಾಗರ್ ಅನಾಟೊಲಿ ಶಾರಿಯವರು ಟೆಲಿಗ್ರಾಮ್ ಚಾನೆಲ್‌ಗೆ ಪೋಸ್ಟ್ ಮಾಡಿದ ನಾಲ್ಕು ಕಿರು ವೀಡಿಯೊ ಕ್ಲಿಪ್‌ಗಳಲ್ಲಿ ಆಕಾಶವು ಇದ್ದಕ್ಕಿದ್ದಂತೆ ಬೆಳಕಿನಿಂದ ಪ್ರಕಾಶಿಸಲ್ಪಟ್ಟಿರುವುದು ಕಾಣುತ್ತದೆ. ಒಂದು ಕ್ಲಿಪ್‌ನಲ್ಲಿ, ಉರಿಯುತ್ತಿರುವ ವಸ್ತುವು ನೆಲಕ್ಕೆ ಅಪ್ಪಳಿಸುತ್ತಿರುವಂತೆ ಕಂಡುಬಂದಿದೆ.
ಈ ದೃಶ್ಯ ನೋಡಿದ ಹಲವರು ಹಾರುವ ವಸ್ತುಗಳ ಬಗ್ಗೆ ಹಲವಾರು ಮೀಮ್‌ಗಳನ್ನು ಸೃಷ್ಟಿಸಿದ್ದಾರೆ. ಆದರೆ ಕೀವ್ ನಗರದ ಮಿಲಿಟರಿ ಆಡಳಿತವು ಇದು ಕ್ರ್ಯಾಶ್ ಆಗುತ್ತಿರುವ ನಾಸಾ ಉಪಗ್ರಹವೆಂದು ಹೇಳಿದೆ.
ಆದರೆ ನಾಸಾ ವಕ್ತಾರರು ಇದನ್ನು ನಿರಾಕರಿಸಿದ್ದಾರೆ. ಹಳೆಯ ಉಪಗ್ರಹವೊಂದು 21 ವರ್ಷದ ಬಳಿಕ ಭೂಮಿಗೆ ಅಪ್ಪಳಿಸಲಿದೆ ಎಂದು ಕೆಲ ದಿನಗಳ ಹಿಂದೆ ನಾಸಾ ಪ್ರಕಟಣೆಯನ್ನ ಈ ರೀತಿ ಗೊಂದಲಕ್ಕೊಳಗಾಗುವಂತೆ ಹೇಳಲಾಗಿದೆಯಷ್ಟೇ ಎಂದು ನಾಸಾ ಹೇಳಿದೆ.
ರಷ್ಯಾ ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಕ್ರೇನ್ ವಾಯುಪಡೆ ಹೊಡೆದುರುಳಿಸಲು ಪ್ರಯತ್ನದಲ್ಲಿ ಇಂತಹ ಬೆಳಕು ಮೂಡಿರಬಹುದು ಎಂದು ಸಹ ಹೇಳಲಾಗ್ತಿದೆ.