
ಲಖ್ನೋ: ಹರ್ ಘರ್ ತಿರಂಗಾ 2.0 ಅಭಿಯಾನದ ಭಾಗವಾಗಿ ಉತ್ತರ ಪ್ರದೇಶ ಅಂಚೆ ವಿಭಾಗದ ಪ್ರತಿ ಅಂಚೆ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.
ಉತ್ತರ ಪ್ರದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ 20 X 30 ಇಂಚಿನ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ಲಖ್ನೋ ಅಂಚೆ ವಿಭಾಗದ ಜನರಲ್ ಪೋಸ್ಟ್ ಮಾಸ್ಟರ್ ಹೇಳಿದ್ದಾರೆ. ರಾಷ್ಟ್ರಧ್ವಜವನ್ನು ಜನರು ಇಂಡಿಯಾ ಪೋಸ್ಟ್ ವೆಬ್ಸೈಟ್ http://www.epostoffice.gov.in ಮೂಲಕವೂ ಖರೀದಿಸಬಹುದಾಗಿದೆ. ಆನ್ಲೈನ್ ನಲ್ಲಿ ಒಬ್ಬ ವ್ಯಕ್ತಿ 5 ಧ್ವಜ ಖರೀದಿಸಬಹುದಾಗಿದ್ದು, ಡೆಲಿವರಿ ಚಾರ್ಜ್ ಇರುವುದಿಲ್ಲ ಎಂದು ಅಂಚೆ ಇಲಾಖೆ ಮಾಹಿತಿ ನೀಡಿದೆ.