
ಸಿಸೋಡಿಯಾ ಅವರ ಹೊಸ ಸ್ನೇಹಿತ ಬೇರೆ ಯಾರೂ ಅಲ್ಲ. ಆತ ಐದು ವರ್ಷದ ಬಾಲಕ ಹಿತೇನ್ ಕೌಶಿಕ್. 5 ವರ್ಷದ ಮಕ್ಕಳೆಂದರೆ ವರ್ಣಮಾಲೆ, ಆಕಾರಗಳು ಮತ್ತು ಬಣ್ಣಗಳು ಮುಂತಾದ ವಿಷಯಗಳ ಬಗ್ಗೆ ಅಷ್ಟೇ ತಿಳಿದಿರುತ್ತಾರೆ. ಆದರೆ, ಹಿತೇನ್ ಭಾರತ ಮಾತ್ರವಲ್ಲ ಅಮೆರಿಕಾದ ಎಲ್ಲಾ ರಾಜ್ಯಗಳ ಹೆಸರುಗಳನ್ನು ಹೇಳುತ್ತಾನೆ. ಸಂಸ್ಕೃತ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿಯೂ ನಿರರ್ಗಳವಾಗಿ ಮಾತನಾಡುತ್ತಾನೆ.
SHOCKING: ಡ್ರಾಪ್ ಕೇಳುವ ನೆಪದಲ್ಲಿ ಗ್ಯಾಂಗ್ ಮಾಡಿದ್ದೇನು ಗೊತ್ತಾ…?
“ಇಂದು, ನಾನು ಹೊಸ ಚಿಕ್ಕ ಸ್ನೇಹಿತನನ್ನು ಹೊಂದಿದ್ದೇನೆ. ಐದನೇ ವಯಸ್ಸಿನಲ್ಲಿ, ಅವರು ಮೂರು ವಿಭಿನ್ನ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಫ್ರೆಂಚ್, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತಾರೆ. ಹಿತೇನ್, ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಯಿತು” ಎಂದು ಸಿಸೋಡಿಯಾ ಬರೆದಿದ್ದು, ಮಗುವಿನ ಸಾಧನೆಯೊಂದಿಗೆ ಅವರ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
‘ಗೂಗಲ್ ಬಾಯ್’ ಎಂದು ಕರೆಯಲ್ಪಡುವ ಹಿತೇನ್, ಸಿಸೋಡಿಯಾ ಅವರ ಟ್ವೀಟ್ ಗೆ ಉತ್ತರಿಸುತ್ತಾ, “ನಿಮ್ಮ ಸಹಕಾರ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳು ಸರ್” ಎಂದು ಬರೆದಿದ್ದಾರೆ.
ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್
ಸಿಸೋಡಿಯಾ ಅವರ ಟ್ವೀಟ್ ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ವಾಹ್ ನಿಜವಾಗಿಯೂ ಪ್ರಭಾವಶಾಲಿಯಾಗಿದೆ. ಈ ಯುವ ಪೀಳಿಗೆಯು ನಮಗಿಂತ ತುಂಬಾ ಮುಂದಿದೆ” ಎಂದಿದ್ದರೆ, ಮತ್ತೊಬ್ಬರು, “ಅದ್ಭುತ ಮಗು! ದೇವರ ಆಶೀರ್ವಾದ” ಎಂದು ಪ್ರತಿಕ್ರಿಯಿಸಿದ್ದಾರೆ.
ಹಿತೇನ್ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ತಮ್ಮ ಹೆಸರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೋಂದಾಯಿಸಿದ್ದಾರೆ.