alex Certify BREAKING : ಐವರು ಶಂಕಿತ ಉಗ್ರರು 7 ದಿನ ‘ಸಿಸಿಬಿ’ ಕಸ್ಟಡಿಗೆ : ‘NIA’ ವಿಶೇಷ ಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಐವರು ಶಂಕಿತ ಉಗ್ರರು 7 ದಿನ ‘ಸಿಸಿಬಿ’ ಕಸ್ಟಡಿಗೆ : ‘NIA’ ವಿಶೇಷ ಕೋರ್ಟ್ ಆದೇಶ

ಬೆಂಗಳೂರು : ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿ ಬೆಂಗಳೂರಿನ ಎನ್ ಐ ಎ ಕೋರ್ಟ್ ಗೆ ಹಾಜರುಪಡಿಸಿದೆ.

ವಿಚಾರಣೆ ನಡೆಸಿದ ಎನ್ ಐ ಎ ವಿಶೇಷ ಕೋರ್ಟ್ ಐವರು ಶಂಕಿತ ಉಗ್ರರನ್ನು ಏಳು ದಿನಗಳ ಕಾಲ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. 15 ದಿನ ತಮ್ಮ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಮಾಡಿಕೊಂಡಿತ್ತು, ಆದರೆ ಕೋರ್ಟ್ 7 ದಿನ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಗಳೂರಿನ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಶಂಕಿತ ಉಗ್ರರ ಪೈಕಿ ಐವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ನಂಬರ್-1 ನಜೀರ್ ಹಾಗೂ ಆರೋಪಿ ನಂಬರ್ 2 ಸದ್ಯ ಪರಾರಿಯಾಗಿದ್ದು, 3 ಸುಹೇಲ್, 4 ಉಮರ್, 5, ಜಾಹೀದ್, 6 ಮುದಾಸಿರ್, ಫೈಜಲ್ ಆರೆಸ್ಟ್ ಆಗಿದ್ದಾರೆ.

ಹೋಟೆಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳೇ ಶಂಕಿತ ಉಗ್ರರ ಟಾರ್ಗೆಟ್ ಆಗಿದ್ದು, ಜನಸಂಖ್ಯೆ ಹೆಚ್ಚಿರುವ ಬಸ್ ನಿಲ್ದಾಣ ಹಾಗೂ ಹೋಟೆಲ್ ಗಳಲ್ಲಿ ಬಾಂಬ್ ಸ್ಪೋಟಿಸಲು ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆ ರಾಜ್ಯದ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅಲರ್ಟ್ ಆದ ಪೊಲೀಸರು ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ಮಾಡಲಾಗಿದೆ. ಜೊತೆಗೆ ರೈಲ್ವೆ ಪ್ರಯಾಣಿಕರ ಬ್ಯಾಗ್ಗಳನ್ನು ಕೂಡ ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸಿಸಿಬಿ ಪೊಲೀಸರು ಇಂದು ಜುನೈದ್, ಸೊಹೈಲ್, ಉಮರ್, ಮುದಾಸಿರ್ ಮತ್ತು ಜಾಹಿದ್ ಎಂಬ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇವರ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುವ ಸಂಶವಿದೆ ಎಂದು ಹೇಳಿದ್ದಾರೆ.
ಇವರಿಗೆ ವಿದೇಶದಿಂದ ಫಂಡಿಂಗ್ ಕೂಡ ಆಗಿದೆ. ಶಂಕಿತರ ಬೆಂಗಳೂರನ್ನೇ ಟಾರ್ಗೆಟ್ ಮಾಡಿದ್ರೂ, ಉಗ್ರರ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ಆಗಲಿದೆ. ಉಗ್ರರ ಪ್ಲ್ಯಾನ್ ವಿಫಲಗೊಳಿಸಲಾಗಿದೆ. ಎಲ್ ಇಟಿ ಉಗ್ರ ನಜೀರ್ ಇವರಿಗೆ ತರಬೇತಿ ನೀಡಿದ್ದ.ಸದ್ಯ 7 ಪಿಸ್ತೂಲ್ , ಹಲವಾರು ಸ್ಫೋಟಕ ವಸ್ತುಗಳು ಮತ್ತು ಇತರ ವಸ್ತುಗಳನ್ನು ಮತ್ತು ಅವರ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ಐವರು ಆರೋಪಿಗಳು 2017 ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು, ಅಲ್ಲಿ ಅವರು ಕೆಲವು ಭಯೋತ್ಪಾದಕರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ಸ್ಫೋಟಕಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ಪಡೆದಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...