ಬೆಂಗಳೂರು : ಬಡವರ ‘ಫೈವ್ ಸ್ಟಾರ್’ ಎಂದೇ ಜನಪ್ರಿಯವಾದ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಇಂದಿರಾ ಕ್ಯಾಂಟೀನ್’ ಇನ್ನಷ್ಟು ಹೈಟೆಕ್ ಆಗಲಿದೆ.
ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸ ಬದಲಾವಣೆ ತರಲು ಬಿಬಿಎಂಪಿ ಸಿದ್ದತೆ ನಡೆಸಿದ್ದು, ಶೀಘ್ರದಲ್ಲೇ ಊಟದ ಮೆನು ಬದಲಾವಣೆ ಮಾಡಲು ಬಿಬಿಎಂಪಿ ಸಿದ್ದತೆ ನಡೆಸಿದೆ. ಈ ಹಿನ್ನೆಲೆ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಶುದ್ದ ಕುಡಿಯುವ ನೀರು, ಸರಿಯದ ವಿದ್ಯುತ್ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ಇಂದಿರಾ ಕ್ಯಾಂಟೀನ್ ನಲ್ಲಿ ದಿನನಿತ್ಯ ಬೇರೆ ಬೇರೆ ತಿಂಡಿ. ಊಟದ ವ್ಯವಸ್ಥೆ ಮಾಡಲಾಗುತ್ತದೆ, ಶೀಘ್ರದಲ್ಲೇ ಆಹಾರದ ಮೆನು ಬದಲಾಗಲಿದೆ ಎಂದರು. ಈ ಮೂಲಕ ಇಂದಿರಾ ಕ್ಯಾಂಟೀನ್ ಇನ್ನಷ್ಟು ಹೈಟೆಕ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಅದೇ ರೀತಿ ಇಂದಿರಾ ಕ್ಯಾಂಟೀನ್ ನಲ್ಲಿ ‘ನಂದಿನಿ’ ಉತ್ಪನ್ನಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಚಾಕೋಲೇಟ್ , ಬಿಸ್ಕತ್, ಐಸ್ ಕ್ರೀಂ , ಹಾಲು, ಮೊಸರು ಸೇರಿದಂತೆ ಹಲವು ನಂದಿನಿ ಉತ್ಪನ್ನಗಳು ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ. ಇಂದಿರಾ ಕ್ಯಾಂಟೀನ್ ಗೆ ಬರುವ ಜನರು ನಂದಿನಿ ಐಸ್ ಕ್ರೀಂ ಸವಿಯಬಹುದಾಗಿದೆ. ಈ ಮೂಲಕ ಇಂದಿರಾಕ್ಯಾಂಟೀನ್ ಮತ್ತಷ್ಟು ಹೈಟೆಕ್ ಆಗಲಿದೆ.